Kannada NewsKarnataka NewsLatest

*BREAKING: ವಿಜಯಪುರದಲ್ಲಿ ಮತ್ತೆ ಭೂಕಂಪ*

ಪ್ರಗತಿವಾಹಿನಿ ಸುದ್ದಿ: ವಿಜಯಪುರ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಭೂಕಂಪ ಸಂಭವಿಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಬೆಳಿಗ್ಗೆ 11:43ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜೋರಾದ ಶಬ್ಧದೊಂದಿಗೆ ಭೂಮು ನಡುಗಿದ್ದು, ಜನರು ಭಯಭೀತಗೊಂಡಿದ್ದಾರೆ.

ವಿಜಯಪುರ, ಆದರ್ಶ ನಗರ, ಭೂತನಾಳ, ಪಾನಿನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ಜನರು ಮನೆಯಿಂದ ಹೊರಗೊದಿ ಬಂದಿದ್ದಾರೆ.

ವಿಜಯಪುರದಲ್ಲಿ ಕೆಲ ದಿನಗಳ ಹಿಂದೆಯೂ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಭೂಕಂಪವುಂಟಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

Home add -Advt

Related Articles

Back to top button