ಮುಖ್ಯಮಂತ್ರಿಗಳ ಪತ್ರಿಕಾಗೊಷ್ಠಿಯ ಆಡಿಯೋ –
ಮೂಲಗಳ ಪ್ರಕಾರ ನಾಳೆ ಮಧ್ಯಾಹ್ನ 2.30ಕ್ಕೆ ಪ್ರಮಾಣ ವಚನ ಸ್ವೀಕಾರ ಖಚಿತ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಸಚಿವಸಂಪುಟ ರಚನೆ ಸಂಬಂಧ ಇನ್ನೂ 2- 3 ವಿಚಾರ ಫೈನಲ್ ಆಗಬೇಕಿದ್ದು, ನಾಳೆ ಬೆಳಗ್ಗೆ ಬೇಗ ಫೈನಲ್ ಆದರೆ ನಾಳೆಯ ಮಧ್ಯಾಹ್ನ ನಂತರ ಉತ್ತಮ ಮುಹೂರ್ತ ನೋಡಿ ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈಗಷ್ಟೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಬೆಳಗ್ಗೆ 6.10 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುತ್ತೇನೆ. ವರಿಷ್ಠರು 2 -3 ವಿಚಾರ ಅಂತಿಮಗೊಳಿಸಿ ದೂರವಾಣಿ ಮೂಲಕ ತಿಳಿಸುತ್ತಾರೆ. ಅದಾದ ನಂತರ ಪ್ರಮಾಣ ವಚಕ್ಕೆ ಮುಹೂರ್ತ ನಿರ್ಧರಿಸಲಾಗುವುದು ಎಂದರು.
2 -3 ವಿಚಾರ ಯಾವುದು?
ಸಚಿವ ಸಂಪುಟಕ್ಕೆ ಈಗ ಎಷ್ಟು ಜನರನ್ನು ಸೇರಿಸಿಕೊಳ್ಳಬೇಕು ಎನ್ನುವುದು ಇನ್ನೂ ನಿರ್ಧಾರವಾಗಬೇಕಿದೆ. ಸಂಖ್ಯೆ ನಿರ್ಧಾರವಾಗಬೇಕಿದೆ. ಜೊತೆಗೆ ಉಪಮುಖ್ಯಮಂತ್ರಿ ಇರಬೇಕೆ? ಇದ್ದರೆ ಎಷ್ಟು? ಯಾರ್ಯಾರು? ಎನ್ನುವುದು ನಿರ್ಧಾರವಾಗಬೇಕಿದೆ ಎಂದು ಬೊಮ್ಮಾಯಿ ತಿಳಿಸಿದರು.
ವಲಸಿಗರು, ಮೂಲ ಬಿಜೆಪಿಗರು ಎನ್ನುವುದಿಲ್ಲ. ಹಿರಿಯರು, ಹೊಸಬರು ಎಲ್ಲರೂ ಇರಬೇಕು. ಪ್ರಾದೇಶಿಕ, ಸಾಮಾಜಿಕ ನ್ಯಾಯ ಎಲ್ಲ ವಿಚಾರ ಚರ್ಚೆಯಾಗಿದೆ. ಕೆಲವು ವಿವರಣೆ ಕೇಳಿದ್ದರು ಎಲ್ಲವನ್ನೂ ಒದಗಿಸಲಾಗಿದೆ ಎಂದು ಹೇಳಿದರು.
ವಿಜಯೇಂದ್ರ ಸಂಪುಟ ಸೇರುವ ಸಂಬಂಧ ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷರ ಜೊತೆ ಅಥವಾ ರಾಷ್ಟ್ರೀಯ ಅಧ್ಯಕ್ಷರೇ ಯಡಿಯೂರಪ್ಪ ಜೊತೆ ಮಾತನಾಡಿರಬಹುದು. ನನ್ನೊಂದಿಗೆ ಈ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಬೆಳಗ್ಗೆ ಬೇಗ ಗ್ರೀನ್ ಸಿಗ್ನಲ್ ಸಿಕ್ಕಿದರೆ ನಾಳೆ ಮಧ್ಯಾಹ್ನವೇ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಹೆಚ್ಚಿನ ಚರ್ಚೆ ಏನೂ ಉಳಿದಿಲ್ಲ ಎಂದು ಅವರು ತಿಳಿಸಿದರು.
ಆದರೆ ಮೂಲಗಳ ಪ್ರಕಾರ ನಾಳೆ ಮಧ್ಯಾಹ್ನ 2.30ಕ್ಕೆ ಪ್ರಮಾಣ ವಚನ ಸ್ವೀಕಾರ ಖಚಿತ.
ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ನಾಳೆ ಸಂಜೆ ಪ್ರಮಾಣವಚನ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ