Kannada NewsKarnataka NewsLatest
ಇನ್ನೂ 15 ವರ್ಷ ಕಾಂಗ್ರೆಸ್ ನ್ನು ವಿರೋಧ ಪಕ್ಷದಲ್ಲಿಕೂಡ್ರಿಸುತ್ತೇನೆ – ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ: ಸ್ಥಳೀಯ ಮಹಾತ್ಮಗಾಂಧಿ ರಸ್ತೆಯ ಭವ್ಯ ವೇದಿಕೆಯಲ್ಲಿ ಬೆಳಗಾವಿ ಲೋಕಸಭೆ ಉಪ ಚುನಾವಣೆ ನಿಮಿತ್ತವಾಗಿ ಇಂದು ಸವದತ್ತಿ ರೇಣುಕಾ ಯಲ್ಲಮ್ಮ ಮತಕ್ಷೇತ್ರದ ಯರಗಟ್ಟಿ ಪಟ್ಟಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೆತೃತ್ವದಲ್ಲಿ ಬೆಳಗಾವಿ ಲೋಕ ಸಭಾ ಉಪಚುನಾವಣೆ ನಿಮಿತ್ಯ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಮಂಗಲಾ ಸುರೇಶ ಅಂಗಡಿ ಅವರ ಪರ ಪ್ರಚಾರ ಸಭೆ ಜರುಗಿತು.

ನಾನು ಸಿ ಎಮ್ ಆದ ವೇಳೆಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಹೆಚ್ಚಾಯಿತು ಅದು ಮಾಸುವ ಮೊದಲೆ ಕೊರೋನಾ ಮಾಹಾಮಾರಿ ವಕ್ಕರಿಸಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟ ಎದುರಿಸುವ ಸಂದರ್ಭ ಎದುರಾಗಿತ್ತು ಎಂದರು.

ನಂತರ ಮಾತನಾಡಿದ ವಿಧಾನ ಸಭಾ ಉಪಸಭಾಧ್ಯಕ್ಷರಾದ ಆನಂದ ಮಾಮನಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಲವಾರು ಅಭಿವೃದ್ಧಿಗಳನ್ನು ಮಾಡಲಾಗಿದೆ. ಆದರೆ ಕಾಂಗ್ರೆಸ್ ಸರಕಾರ ಸುಮಾರು 60 ವರ್ಷ ಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದರೆ ನಮ್ಮ ಪ್ರಧಾನ ಮಂತ್ರಿಗಳಾದ ನರೆಂದ್ರ ಮೋದಿಜಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾಜ್ಯ ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಸಿ ಸಿ ಪಾಟೀಲ, ಶಾಸಕರಾದ ಪಿ ರಾಜೀವ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಹಣಮಂತ ನಿರಾಣಿ, ಮಾಜಿ ಲೋಕಸಭಾ ಸದಸ್ಯರಾದ ರಮೇಶ ಕತ್ತಿ, ಬಿಜೆಪಿ ಅಭ್ಯರ್ಥಿಯಾದ ಮಂಗಳಾ ಅಂಗಡಿ, ಮಲ್ಲಣ್ಣ ಯಾದವಾಡ, ಎಪಿಎಂಸಿ ಅಧ್ಯಕ್ಷರಾದ ಪ್ರಕಾಶ ನರಿ, ಯರಗಟ್ಟಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಜೀಯಕುಮಾರ ದೇಸಾಯಿ, ವಿದ್ಯಾರಾಣಿ ಸೋನ್ನದ, ಜಿಲ್ಲಾ ಎಸ್ ಟಿ ಮೊರ್ಚ ಅಧ್ಯಕ್ಷರಾದ ಚಂದ್ರಶೇಖರ ಅಳಗೋಡಿ, ಭಾಜಪ ತಾಲೂಕಾ ಅಧ್ಯಕ್ಷರಾದ ಈರಣ್ಣ ಚಂದರಗಿ, ಭಾಜಪ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರ ಜಕಾತಿ, ದಾಲವಸಾಬ ಚಪ್ಟಿ, ಬಸವರಾಜ ಸಾಲಿಮಠ, ಕುಮಾರ ಜಕಾತಿ, ಸದಾನಂದ ಪಾಟೀಲ, ಹಲವಾರು ರಾಜ್ಯದ ಬಿಜೆಪಿ ಪಕ್ಷದ ಸಚಿವರು, ಶಾಸಕರು, ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರು ತಾಲೂಕ ಪಂಚಾಯತ ಅಧ್ಯಕ್ಷರು, ಸದಸ್ಯರು ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಯರಗಟ್ಟಿ ಹಾಗೂ ಸತ್ತಮುತ್ತಲಿನ ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)