Latest

ವರನ ಕೈ ತಾಗಿತು ಎಂದು ಮದುವೆಯನ್ನೇ ನಿಲ್ಲಿಸಿದ ವಧು

ಪ್ರಗತಿವಾಹಿನಿ ಸುದ್ದಿ; ಮಂಗಳೂರು; ಅದ್ಧೂರಿ ಮದುವೆ ಸಮಾರಂಭದ ವೇಳೆ ವಧುವಿನ ಕೊರಳಿಗೆ ಹೂವಿನ ಹಾರ ಹಾಕುವಾಗ ವರನ ಕೈ ತನ್ನ ಕೈಗೆ ತಾಗಿತು ಎಂದು ಮದುವೆಯನ್ನೇ ರದ್ದು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ವರ ಇನ್ನೇನು ವಧುವಿನ ಕೊರಳಿಗೆ ತಾಳಿ ಕಟ್ಟುವ ಶುಭ ಸಂದರ್ಭ. ಇದಕ್ಕೂ ಮೊದಲು ಸಂಪ್ರದಾಯದಂತೆ ವಧು-ವರರು ಹಾರ ಬದಲಿಸುವ ವೇಳೆ ವರನ ಕೈ ವಧುವಿನ ಕೈಗೆ ತಾಗಿದೆ. ಕೋಪಗೊಂಡ ವಧು ಜಗಳ ಆರಂಭಿಸಿದ್ದಾಳೆ. ಮದುವೆಯನ್ನೆ ನಿಲ್ಲಿಸಿದ್ದಾಳೆ.

ಬೆಳ್ತಂಗಡಿ ಮೂಲದ ವರನ ಜತೆ ಮೂಡುಕೋಣಾಜೆ ಮೂಲದ ಯುವತಿಯ ಮದುವೆ ನಿಶ್ಚಯವಾಗಿತ್ತು. ನಾರಾವಿ ದೇವಸ್ಥಾನದ ಬಳಿ ಸಭಾಭವನದಲ್ಲಿ ವಿವಾಹ ಅದ್ಧೂರಿಯಾಗಿ ನಡೆಯುತ್ತಿತ್ತು. ಮದುವೆ ವೇಳೆ ಹಾರಬದಲಿಸಿಕೊಳ್ಳುವ ಸಂದರ್ಭದಲ್ಲಿ ವರನ ಕೈ ತಾಗಿದ್ದಕ್ಕೆ ವಧು ಕ್ಯಾತೆ ತೆಗೆದಿದ್ದಾಳೆ. ಕುಟುಂಬದವರು ವಧುವನ್ನು ಸಮಾಧಾನಪಡಿಸಲು ಮುಂದಾದರೂ ಯುವತಿ ಮದುವೆ ನಿರಾಕರಿಸಿದ್ದಾಳೆ.

ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿ, ಕ್ಷುಲ್ಲಕ ಕಾರಣಕ್ಕೆ ಮದುವೆಯೇ ನಿಂತಿದೆ. ಪ್ರಕರಣ ವೇಣೂರು ಪೊಲಿಸ್ ಠಾಣೆ ಮೆಟ್ಟಿಲೇರಿದೆ.
ಸೇನಾ ಬಸ್ ಭೀಕರ ಅಪಘಾತ; 7 ಯೋಧರ ದುರ್ಮರಣ

Home add -Advt

Related Articles

Back to top button