ಪ್ರಗತಿವಾಹಿನಿ ಸುದ್ದಿ, ಲಂಡನ್: ರಾಣಿ ಎಲಿಝಬೆತ್ -2 ಗುರುವಾರ ನಿಧನರಾದ ನಂತರ ಅವರ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ನ ರಾಜ ಎಂದು ಘೋಷಣೆಯಾಗುತ್ತಿದ್ದಂತೆ ಅವರ ಬಾಲ್ಯದ ಚಿತ್ರವೊಂದು ಸಖತ್ ವೈರಲ್ ಆಗತೊಡಗಿದೆ.
72 ವರ್ಷ ಹಳೆಯದಾದ ಈ ಕಪ್ಪು- ಬಿಳುಪು ಚಿತ್ರ ಈಗ ಜಗತ್ತಿನಾದ್ಯಂತ ಹಲವರ ಕಣ್ಣು ಸೆಳೆದಿದೆ. ಕೇವಲ ನಾಲ್ಕು ವರ್ಷದ ಮುದ್ದುಮುದ್ದಾದ ಪ್ರಿನ್ಸ್ ಚಾರ್ಲ್ಸ್ ತನ್ನ ತಾಯಿಯ ಪಟ್ಟಾಭಿಷೇಕದ ವೇಳೆ ಖಿನ್ನ ಮುಖದಿಂದ ನಿಂತಿರುವ ಚಿತ್ರ ಇದಾಗಿದೆ.
2019 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರಾಯಲ್ ಕಲೆಕ್ಷನ್ ಟ್ರಸ್ಟ್ ಹಂಚಿಕೊಂಡಿದ್ದ ಈ ಚಿತ್ರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚಿತ್ರದ ಕುರಿತು ಪ್ರತಿಕ್ರಿಯಿಸಿದ ಜಾಲತಾಣದ ಬಳಕೆದಾರರು, “ಮಗುವಿಗೆ ಬೇಸರವಾಗಿದೆ” ಎಂದು ಹೇಳಿದ್ದಾರೆ.
ಚಿತ್ರದಲ್ಲಿ, ಚಾರ್ಲ್ಸ್ ತನ್ನ ಅಜ್ಜಿ ಮತ್ತು ಚಿಕ್ಕಮ್ಮ ರಾಜಕುಮಾರಿ ಮಾರ್ಗರೆಟ್ ನಡುವೆ ನಿಂತಿದ್ದಾನೆ.
19 ವರ್ಷದ ಯುವತಿಗೆ ಅವಳಿ ಮಕ್ಕಳು; ತಂದೆ ಬೇರೆ ಬೇರೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ