Latest

ಕೋವಿಡ್ ಗೆ ಬಲಿಯಾದ ಅಕ್ಕ-ತಮ್ಮ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಕೊರೊನಾ ಸೋಂಕು ಹಲವು ಕುಟುಂಬಗಳನ್ನೇ ಬಲಿ ಪಡೆದಿದೆ. ಒಂದೇ ದಿನದ ಅಂತರದಲ್ಲಿ ಮಹಾಮಾರಿಗೆ ಅಕ್ಕ ಹಾಗೂ ತಮ್ಮ ಇಬ್ಬರೂ ಬಲಿಯಾಗಿರುವ ಘಟನೆ ಹೊಸಪೇಟೆಯಲ್ಲಿ ಬೆಳಕಿಗೆ ಬಂದಿದೆ.

ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಹಾಗೂ ಸಾವಿಯೋ ಸ್ಮಿತ್ (42) ಕೋವಿಡ್ ಗೆ ಬಲಿಯಾದ ಅಕ್ಕ-ತಮ್ಮ. ಲೂಸಿಯಾ ಸ್ಮಿತ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿದ್ದರು.

8 ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಲೂಸಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದೇ ವೇಳೆ ಲೂಸಿಯಾ ಸಹೋದರ ಸಾವಿಯೋ ಅವರಿಗೂ ಸೋಂಕು ತಗುಲಿತ್ತು. ಇದೀಗ ಅವರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ರೈತ ಮೋರ್ಚಾದಿಂದ ರಕ್ತದಾನ ಕಾರ್ಯಕ್ರಮ

Home add -Advt

Related Articles

Back to top button