*ವಿದ್ಯಾರ್ಥಿನಿ ಹೆರಿಗೆ ಪ್ರಕರಣದಲ್ಲಿ ಆಘಾತಕಾರಿ ವಿಷಯ ಬಹಿರಂಗ: ಸ್ವಂತ ಅಣ್ಣನಿಂದಲೇ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಏಳು ತುಂಗಳಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಮನೆಯ ಶೌಚಾಲಯದಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದಾಗಲೇ ಕುಟುಂಬದವರಿಗೂ ಶಾಕ್ ಆಗಿದೆ. ಮಗಳ ಈ ಸ್ಥಿತಿ ಕಾರಣನಾದವನು ಯಾರು ಎಂಬುದು ಗೊತ್ತಾಗದೇ ಬಾಲಕಿಯನ್ನು ತೀವ್ರ ವಿಚಾರಿಸಿದಾಗ ಮತ್ತೊಂದು ಆಘಾತಕಾರಿ ವಿಷಯವನ್ನು ಬಾಲಕಿ ಬಾಯ್ಬಿಟ್ಟಿದ್ದಾಳೆ.
ತಾಯಿ ಹಾಗೂ ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಂತ ಅಣ್ಣ ಅಪ್ರಾಪ್ತ ಬಾಲಕನೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಹೆರಿಗೆಯಾಗುವಂತೆ ಮಾಡಿದ್ದಾನೆ. 16 ವರ್ಷದ ಬಾಲಕನ ವಿರುದ್ಧ ದೂರು ನೀಡಲಾಗಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ. ಮಕ್ಕಳ ರಕ್ಷಣಾ ಆಧಿಕಾರಿಗಳು ಕೂಡ ಕೇಸ್ ದಾಖಲಿಸಿಕೊಂಡಿದ್ದಾರೆ.
ಶಾಲೆಯನ್ನು ಬಿಟ್ಟು ಮನೆಯಲ್ಲಿಯೇ ಇದ್ದ ಅಣ್ಣ, ಪೋಷಕರು ಕೆಲಸಕ್ಕೆ ಹೋದಾಗ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ. ವಿಷಯ ಯಾರಿಗೂ ಹೇಳದಂತೆ ಹೆದರಿಸಿದ್ದ. ಒಮ್ಮೆ ತುಂಬಾ ಹೊಟ್ಟೆನೋವು ಬಂದಿತ್ತು ಅಮ್ಮ ಮಾತ್ರೆ ಕೊಟ್ಟಿದ್ದರು. ಅಣ್ಣ ಹೆದರಿಸಿದ್ದರಿಂದ ಯಾರಿಗೂ ತಾನು ಹೇಳಿರಲಿಲ್ಲ. ಶಾಲೆಯ ಯೂನಿಫಾರ್ಮ್ ಗೆ ಕೋಟ್ ಇದ್ದುದರಿಂದ ಹೊಟ್ಟೆ ಬಂದಿದ್ದು ಗೊತ್ತಾಗುತ್ತಿರಲಿಲ್ಲ ಎಂದು ಬಾಲಕಿ ಬಾಯ್ಬಿಟ್ಟಿದ್ದಾಳೆ. ಸ್ವಂತ ಸಹೋದರನೇ ತಂಗಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಭವಿಷ್ಯ, ಬದುಕನ್ನೇ ಹಾಳು ಮಾಡಿದ್ದು, ನಾಗರಿಕ ಸಮಾಜದ ಮಾನಸಿಕ ಸ್ಥಿತಿ ಇಂದು ಎತ್ತ ಸಾಗುತ್ತಿದೆ?