Latest

ಸಹೋದರರ ನಡುವೆ ಜಗಳ; ತಮ್ಮನನ್ನು ಗುಂಡಿಟ್ಟು ಹತ್ಯೆಗೈದ ಅಣ್ಣ

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಸಹೋದರರ ನಡುವೆ ಆರಂಭವಾದ ಕಾದಾಟ ಕೊಲೆಯಲ್ಲಿ ಅಂತ್ಯವಾದ ಘಟನೆ ಕೊಪ್ಪಳ ಜಿಲ್ಲೆಯ ಕವಲೂರಿನಲ್ಲಿ ನಡೆದಿದೆ.

ಜಮೀನಿನ ವಿಚಾರವಾಗಿ ಅಣ್ಣ ರಾಘವೇಂದ್ರನ ಮೇಲೆ ತಮ್ಮಂದಿರಾದ ಯೋಗೇಶ್ ಹಾಗೂ ವಿನಾಯಕ ದೇಸಾಯಿ ದಾಳಿ ನಡೆಸಿದ್ದರು. ಮೂವರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಕೋಪದ ಬರದಲ್ಲಿ ಅಣ್ಣ ರಾಘವೇಂದ್ರ ಬಂದೂಕಿನಿಂದ ತಮ್ಮನ ಮೇಲೆ ಗುಂಡಿನಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ವಿನಾಯಕ ದೇಸಾಯಿ (35) ಮೃತಪಟ್ಟಿದ್ದಾರೆ.

ಇನ್ನೋರ್ವ ಸಹೋದರ ಯೋಗೇಶ್ ಕೂಡ ಗಾಯಗೊಂಡಿದ್ದಾರೆ. ನೂರಾರು ಎಕರೆ ಜಮೀನು ಹೊಂದಿದ್ದ ದೇಸಾಯಿ ಕುಟುಂಬದ ಅಣ್ಣ-ತಮ್ಮಂದಿರ ನಡುವೆ ಆಸ್ತಿಗಾಗಿ ಕಾದಾಟ ಆರಂಭವಾಗಿತ್ತು. ಆಸ್ತಿ ಜಗಳ ಇದೀಗ ಸಹೋದರನನ್ನೇ ಬಲಿ ಪಡೆದಿದೆ.

ಸ್ಥಳಕ್ಕೆ ಕೊಪ್ಪಳ ಜಿಲ್ಲಾ ವರಿಷ್ಥಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಎಸ್ ಐ ಅಭ್ಯರ್ಥಿಗಳನ್ನು ಹಿಡಿದು ಥಳಿಸಿದ HDK ಗನ್ ಮ್ಯಾನ್

Home add -Advt

Related Articles

Back to top button