Kannada NewsLatestNational

*ಭೀಕರ ಕಾರು ಅಪಘಾತ; ಶಾಸಕಿ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣದ ಬಿಆರ್ ಎಸ್ ಪಕ್ಷದ ಶಾಸಕಿ ಲಾಸ್ಯಾ ನಂದಿತಾ ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

ಹೈದರಾಬಾದ್ ನ ಒಆರ್ ಆರ್ ನಲ್ಲಿ ಈ ದುರಂತ ಸಂಭವಿಸಿದೆ. ಶಾಸಕಿ ಲಾಸ್ಯಾ ನಂದಿತಾ (33) ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಲಾಸ್ಯಾ ನಂದಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿ ಆರ್ ಎಸ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಶಾಸಕಿ ಮನೆಗೆ ವಾಪಾಸ್ ಆಗುತ್ತಿದ್ದಾಗಲೂ ಅವರ ಕಾರು ಅಪಘತಕ್ಕೀಡಾಗಿತ್ತು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಲಾಸ್ಯಾ ನಂದಿತಾ ಮೃತಪಟ್ಟಿದ್ದಾರೆ.

ಶಾಸಕಿ ಲಾಸ್ಯಾ ನಂದಿತಾ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಮೃತದೇಹವನ್ನು ಚಿಕ್ಕಡಪಲ್ಲಿ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಲಾಸ್ಯಾ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.


Related Articles

Back to top button