KLE1099 Add

ಪಿಸಿಒಎಸ್ ಕುರಿತು ಕನ್ನಡದಲ್ಲಿ ಫೇಸ್ ಬುಕ್ ಲೈವ್

ಭಾಷೆಯ ಸಮಸ್ಯೆಯಿಂದಾಗಿ ಆರೋಗ್ಯ ಸಮಸ್ಯೆಯನ್ನು ಅದುಮಿಟ್ಟುಕೊಳ್ಳುವ ಸ್ಥಿತಿಯಿಂದ ಮುಕ್ತಗೊಳಿಸುವುದು ಇದರ ಪ್ರಮುಖ ಉದ್ದೇಶ

Beereshwara 6

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ನಿಮ್ಮ ಆರೋಗ್ಯ, ನಿಮ್ಮ ಸವಾಲು” ಎಂಬ  ವಿನೂತನ ಫೇಸ್‌ಬುಕ್ ಲೈವ್‌ನ   ಸರಣಿಯನ್ನು  ಜನವರಿ 17ರಿಂದ ಆರಂಭವಾಗಲಿದೆ. ಅಂದು ಮೊದಲ ಕಾರ್ಯಕ್ರಮವಾಗಿ  ಮಧ್ಯಾಹ್ನ 3 ಗಂಟೆಗೆ PCOS ( ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್) ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿರ್ದಿಷ್ಟ ಪರಿಹಾರ ಸಿಗಲಿದೆ.

ಸರಾಸರಿ ಐವರಲ್ಲಿ ಒಬ್ಬ ಭಾರತೀಯ ಮಹಿಳೆ PCOS ಸಮಸ್ಯೆಯಿಂದಬಳಲುತ್ತಿದ್ದು, ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತೆ  ಕನ್ನಡ ಭಾಷಿಕ ಮಹಿಳೆಯರಿಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ.  ಭಾಷೆಯ ಸಮಸ್ಯೆಯಿಂದಾಗಿ ಆರೋಗ್ಯ ಸಮಸ್ಯೆಯನ್ನು ಅದುಮಿಟ್ಟುಕೊಳ್ಳುವ ಸ್ಥಿತಿಯಿಂದ ಮುಕ್ತಗೊಳಿಸುವುದು ಇದರ ಪ್ರಮುಖ ಉದ್ದೇಶ.

ವಿಶ್ವದ ಪ್ರತಿ ಮಹಿಳೆಯನ್ನು ತಲುಪುವ ಗುರಿ ಹೊಂದಲಾಗಿದ್ದು,  ವೆಲ್ ವುಮನ್ ಹೆಲ್ತ್‌ಕೇರ್‌ನ ಅಧ್ಯಕ್ಷರಾದ ಡಾ. ಹೇಮಾ ದಿವಾಕರ್ ಅವರು, ಅಂತಾರಾಷ್ಟ್ರೀಯ ಮಟ್ಟದ ಸ್ತ್ರೀರೋಗ ತಜ್ಞರು ಮತ್ತು ಪ್ರಸೂತಿ ತಜ್ಞರ ಫೆಡರೇಶನ್ (FIGO) ಮೂಲಕ ರೂಪಿಸಿರುವ ಯೋಜನೆಯಾಗಿದೆ.

ಈ ಸರಣಿಯು ಹೆಲ್ತ್ ಫಾರ್ ಹರ್‌ನ ಭಾಗವಾಗಿದೆ. ಡಾಕ್ಸ್‌ಪೇಸ್‌ಪ್ಲಸ್ ಸಹಯೋಗದೊಂದಿಗೆ ದಿವಾಕರ್ಸ್ ಸರ್ವಿಸ್ ಟ್ರಸ್ಟ್‌ನ ಬೆಂಬಲದೊಂದಿಗೆ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯು  ಈ ವಿನೂತನ ಯೋಜನೆಯನ್ನು ಪ್ರಾರಂಭಿಸುತ್ತಿದೆ.

ಆರು ಸಂಚಿಕೆಗಳ ಸರಣಿಯು 15 ದಿನಗಳಿಗೊಮ್ಮೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನೇರಪ್ರಸಾರವಾಗಲಿದೆ. ಮಹಿಳೆಯರ ಆರೋಗ್ಯದ ವಿಷಯದಲ್ಲಿ  ಕೇಳಿಬರುವ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸಂವಾದಾತ್ಮಕ ಶೈಲಿಯಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಹಾರ ಪಡೆಯಬಹುದಾಗಿದೆ.  ಮುಂಬರುವ ವಾರಗಳಲ್ಲಿ, ಋತುಚಕ್ರದ ಸಮಸ್ಯೆ, ತಾಯಿಯ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಋತುಬಂಧದ ಆರೋಗ್ಯ ಕುರಿತಾದ ಕಾರ್ಯಕ್ರಮಗಳು ನಡೆಯಲಿವೆ.

ಅನಾರೋಗ್ಯವನ್ನು ತಡೆಗಟ್ಟಲು ಮತ್ತು ಉತ್ತಮ ಜೀವನ ಶೈಲಿಯನ್ನು ಪ್ರೋತ್ಸಾಹಿಸುವ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ವಿಷಯದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಸಾಕಷ್ಟು ಅರಿವನ್ನು ಮೂಡಿಸುತ್ತದೆ.

ರಾಷ್ಟ್ಕಮಟ್ಟದ ಹಲವಾರು ತಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅವರು  ಸಮಸ್ಯೆಗಳ ಕುರಿತು ಕನ್ನಡದಲ್ಲಿ ಮಾತನಾಡುತ್ತಾರೆ.

ಈ ಸರಣಿಯು ಶೀಘ್ರದಲ್ಲೇ ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗಲಿದೆ. ಕಾರ್ಯಕ್ರಮದ ನಂತರ YouTube ನಲ್ಲಿ ಇದು ಲಭ್ಯವಾಗುವಂತೆ ಮಾಡಲಾಗುತ್ತದೆ.

ಜನವರಿ 17 ರ ಕಾರ್ಯಕ್ರಮದ ನಂತರ ಹೆಚ್ಚಿನ ವೈದ್ಯರನ್ನು  ಸಂಪರ್ಕಿಸಲು HealthforHer ಅಪ್ಲಿಕೇಶನ್ (Google Play Store & IOS) ಮೂಲಕ ಪ್ರಶ್ನೆಗಳನ್ನು ಕೇಳಬಹುದು.

ಫೇಸ್‌ಬುಕ್ ಲೈವ್ ಸಮಯ –  ಜನವರಿ 17ರಂದು  ಮಧ್ಯಾಹ್ನ 3 ಗಂಟೆ.
ಲೈವ್ ವೀಕ್ಷಿಸಲು ಲಿಂಕ್:  http://facebook.com/DocSpacePlus

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:

ಡಾ.ಹೇಮಾ ದಿವಾಕರ್
ಸಲಹೆಗಾರರು, ObGyn ಮತ್ತು ವೈದ್ಯಕೀಯ ನಿರ್ದೇಶಕರು,
ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
ಅಧ್ಯಕ್ಷರು, FOGSI 2013, ಸಂಘಟನಾ ಅಧ್ಯಕ್ಷರು AICOG 2019,
CEO – ARTIST For Her (ಕೌಶಲ್ಯ ವರ್ಗಾವಣೆಗಾಗಿ ಏಷ್ಯನ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆ)
FIGO ಗೆ FOGSI ರಾಯಭಾರಿ (ಅಂತರರಾಷ್ಟ್ರೀಯ ಸ್ತ್ರೀರೋಗ ತಜ್ಞರು ಮತ್ತು ಪ್ರಸೂತಿ ತಜ್ಞರ ಒಕ್ಕೂಟ)
ಮೊಬೈಲ್: 9844046724 | ಇಮೇಲ್: drhemadivakar@gmail.com

ಭಾಷಾ ಸಮಸ್ಯೆ ಬದಿಗಿಡಿ, ಯಾವುದೇ ಸಮಸ್ಯೆ ತೆರೆದಿಡಿ; ಫೇಸ್ ಬುಕ್ ಲೈವ್

You cannot copy content of this page