Advertisement

ರಕ್ತ ದಾನ ಮಾಡುವ ಮುನ್ನ ಇದನ್ನು ಓದಿ

ಯಾರು, ಯಾರಿಗೆ ರಕ್ತ ದಾನ ಮಾಡಬಹುದು? -ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆ

ರಕ್ತದಾನದ ಜಾಗೃತಿ ಮತ್ತು ರಕ್ತದಾನ ಮಾಡಿದವರಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಜಾಗೃತಿ ಮೂಡಿಸಿ ರಕ್ತ ದಾನದಿಂದಾಗುವ ಲಾಭಗಳನ್ನು ತಿಳಿಸುತ್ತಿರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಘೋಷ ವಾಕ್ಯ ”ಸುರಕ್ಷಿತ ರಕ್ತ -ಜೀವವನ್ನು ಉಳಿಸುತ್ತದೆ ” (SAFE BLOOD, SAVES LIVES ) ಎಂಬ ಘೋಷ ವಾಕ್ಯದೂಂದಿಗೆ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕೊರೊನಾದ ಲಾಕ್‌ಡೌನ್ ಸಮಯದಲ್ಲಿ ಜನರು ಹೊರಬರುವುದೇ ದುಸ್ತರವಾಗಿದೆ. ಆದರೆ ಇಂತಹ ಕ್ಲಿಷ್ಟ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿರುವ ರೋಗಿಗಳು ಮತ್ತು ಅವರ ಸಂಬಂಧಿಕರ ಪಾಡು ಹೇಳತೀರದು.
ದಾನಗಳಲ್ಲಿ ಶ್ರೇಷ್ಟವಾದ ದಾನವೆಂದರೆ ಅದು ರಕ್ತ ದಾನ, ನಾವು ಜೀವಂತವಿರುವಾಗ ಪದೆ ಪದೆ ನಮ್ಮ ದೇಹದಿಂದ ಕೊಡಬಹುದಾದ ಏಕೈಕ ದಾನವೆಂದರೆ ಅದು ರಕ್ತ ದಾನ. ವಿಜ್ಞಾನದಲ್ಲಿ ನಾವು ಎಷ್ಟೆ ಮುಂದುವರೆದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಇದು ಮಾನವನಿಂದ ಮಾನವನಿಗೆ ಮಾತ್ರ ಕೂಡಬಹುದಾಗಿದೆ. ಎಷ್ಟೋ ಜನರಲ್ಲಿ ರಕ್ತ ದಾನ ಮಾಡುವುದರ ಬಗ್ಗೆ ಅವೈಜ್ಞಾನಿಕವಾದ ಪರಿಕಲ್ಪಣೆಗಳು ಬಹಳಷ್ಟಿವೆ. ರಕ್ತ ದಾನದಿಂದ ನಮ್ಮ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ, ನಮ್ಮ ಶಕ್ತಿ ಕುಂದುತ್ತದೆ, ಹೀಗೆ ಅನೇಕ ಗೊಂದಲಗಳನ್ನು ತಮ್ಮ ಮನದಲ್ಲಿ ತುಂಬಿಕೊಂಡಿರುತ್ತಾರೆ. ಅದನ್ನೆಲ್ಲಾ ಹೋಗಲಾಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರಕ್ತ ಭಂಡಾರಗಳು ಜನರಿಗೆ ಅರಿವು ಮುಡಿಸುತ್ತಲೇ ಇವೆ. ಆದರು ಜನರಲ್ಲಿ ರಕ್ತದಾನವೆಂದರೆ ಭಯ ಇನ್ನೂ ಇದೆ. ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವುದನ್ನು ಜನರಲ್ಲಿ ಉತ್ತೇಜನ ತುಂಬಬೇಕಾಗಿದೆ.
ಒಂದು ಸಾರಿ ರಕ್ತ ದಾನ ಮಾಡುವುದರಿಂದ ೪ ಜನರ ಜೀವ ಉಳಿಸುತ್ತದೆ. ರಕ್ತದ ಭಾಗಗಳಾದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲಾಸ್ಮಾ ಮತ್ತು ಕ್ರಾಯೂ ಕಣಗಳನ್ನು ಬೇರ್ಪಡಿಸಿ, ರೋಗಿಗಳ ಅವಶ್ಯಕತೆಯ ಅನುಸಾರವಾಗಿ ರಕ್ತದ ಪರಿಕರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ೪ ಜೀವಗಳನ್ನು ಉಳಿಸಬಹುದು.
೧) ಕೆಂಪು ರಕ್ತ ಕಣಗಳು (Red Blood Cells ) ದೇಹದ ಹಿಮೋಗ್ಲೋಬಿನ್ ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ.
೨) ಲ್ಯುಕೋಸೈಟ್ಸಳು ಎಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳು ( White Blood Cells ) ಸಾಂಕ್ರಾಮಿಕ ರೋಗ ಮತ್ತು ದೇಹದಲ್ಲಿ ಪ್ರವೇಶಿಸುವ ಹೊರ ವಸ್ತುಗಳು ವಿರುದ್ಧ ದೇಹವನ್ನು ರಕ್ಷಿಸುವಲ್ಲಿ ತೊಡಗಿರುವ ಪ್ರತಿರಕ್ಷಣಾ ವ್ಯವಸ್ಥೆಯ ಕೋಶಗಳಾಗಿವೆ.
೩) ಪ್ಲಾಸ್ಮಾ (Plasma) ಕೋಶಗಳನ್ನು ಪ್ಲಾಸ್ಮಾ ಬಿ ಜೀವಕೋಶಗಳು ಎಂದು ಕರೆಯುತ್ತಾರೆ, ಇದು ಮೂಳೆ ಮಜ್ಜೆಯಲ್ಲಿ ಹುಟ್ಟುವ ಬಿಳಿ ರಕ್ತ ಕಣಗಳು ಮತ್ತು ಪ್ರತಿಜನಕಗಳು ಎಂದು ಕರೆಯಲ್ಪಡುವ ನಿರ್ದಿಷ್ಟ ಪದಾರ್ಥಗಳನ್ನು ಪ್ರಸ್ಥುತಪಡಿಸುವದಕ್ಕೆ ಪ್ರತಿಕಾಯಗಳು ಎಂದು ಕರೆಯಲ್ಪಡುವ ದೊಡ್ಡ ಪ್ರಮಾಣದ ಪ್ರೋಟೀನ್ ಗಳನ್ನು ಸ್ರವಿಸುತ್ತದೆ.  ಪ್ಲಾಸ್ಮಾಅನ್ನು ಉಪಯೋಗಿಸಿಕೊಂಡು ಪ್ಲಾಸ್ಮಾ ಥೆರಪಿ ಕೊರೋನ ರೋಗಿಗಳಿಗೆ ಉಪಚರಿಸಲು ಉಪಯೋಗಿಸಲಾಗುತ್ತಿದೆ.
೪) ಕ್ರಾಯೂ ( Cryo ) ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್ ಲೆಟ್ ಗಳನ್ನು ಬೇರ್ಪಡಿಸಿ ಉಳಿಯುವ ಕಣಗಳೆಂದರೆ ಕ್ರಾಯೂ. ಇದು ರಕ್ತಸ್ರಾವವನ್ನು ತಡೆಗಟ್ಟುವದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ರಕ್ತದಲ್ಲಿ ಸಾಮಾನ್ಯವಾಗಿ ಎ.ಬಿ. ಓ ಮತ್ತು ಎಬಿ ರಕ್ತದ ಗುಂಪುಗಳು ಕಾಣಸಿಗುತ್ತವೆ. ಆದರೆ ಇತ್ತೀಚಿನ ಸಂಶೋಧನೆಗಳ ಫಲಶ್ರುತಿಯಾಗಿ ಹೊಸ ಮಾದರಿಗಳಾದ ಬಾಂಬೆ ರಕ್ತದ ಗುಂಪು, ಎ೧ ಹಾಗೂ ಎ೧ಬಿ ಹೀಗೆ ಅಭಿವೃಧ್ಧಿಯನ್ನು ಕಾಣುತ್ತಿದೆ. ಈ ವಿರಳ ಗುಂಪಿನ ರಕ್ತದವರು ನಮ್ಮ ದೇಶದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿದ್ದು ಇವರು ಹೆಸರುಗಳು ದೆಹಲಿಯ ರಾಷ್ಟ್ರೀಯ ರಕ್ತದಾನಿಗ ಪರಿಷತ್ತಿನ ಹೆಸರಿನ ಪಟ್ಟಿಯಲ್ಲಿ ಸಿಗುತ್ತವೆ. ಈ ಗುಂಪುಗಳ ವ್ಯಕ್ತಿಗಳು ವಿರಳತೆಯ ಕಾರಣದಿಂದ ಸಾಮಾನ್ಯವಾಗಿ ಇವರಿಂದ ರಕ್ತ ಪಡೆಯಲಾಗುವುದಿಲ್ಲ. ಆದರೆ ಅವಶ್ಯಕತೆಯ ಆಧಾರದ ಮೇಲೆ ನಿಯಮಿತವಾಗಿ ಸ್ವೀಕರಿಸಲಾಗುತ್ತದೆ.
ರಕ್ತದಾನದಿಂದಾಗುವ ಲಾಭಗಳೆಂದರೆ ಹಳೆಯ ರಕ್ತ ಹೊರ ಹೋಗುವುದರಿಂದ ದೇಹದಲ್ಲಿ ಹೊಸತನದ ಅನುಭವ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ, ಅನುವಂಶಿಕವಾಗಿ ಬಂದಂತಹ ಖಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು, ನರವ್ಯೂಹಕ್ಕೆ ಸಂಬಂಧಿತ ಖಾಯಿಲೆಗಳು ಹಾಗೂ ಇತ್ಯಾದಿ ಖಾಯಿಗಳಿಂದ ಶೆಕಡಾ ೮೦ ರಷ್ಟು ಗುಣಹೊಂದಬಹುದಾಗಿದೆ, ದೃಷ್ಟಿದೋಷಗಳ ನಿವಾರಣೆ ಹೀಗೆ ಅನೇಕ ಸಮಸ್ಯೆಗಳಿಗೆ ಔಷಧವಿಲ್ಲದೇ ಪರಿಹಾರ ಕಂಡುಕೊಳ್ಳಬಹುದಾಗಿದೆ.
ರಕ್ತವನ್ನು ಯಾರು ಯಾರಿಗೆ ನೀಡಬಹುದು ಎಂದು ಈ ಕೆಳಗಿನ ನಕಾಶೆಯ ಮೂಲಕ ತಿಳಿದುಕೊಳ್ಳಬಹುದು.


ಯಾರು ರಕ್ತ ದಾನ ಮಾಡಬಹುದು?
೧) ೧೮ ವರ್ಷ ವಯಸ್ಸು ಮೇಲ್ಪಟ್ಟ ಹೆಣ್ಣುಗಂಡೆಂಬ ಭೇದವಿಲ್ಲದೇ ಆರೋಗ್ಯವಂತ ಎಲ್ಲರೂ ದಾನ ಮಾಡಬಹುದು.
೨) ೪೫ ಕೆಜಿ ಗಿಂತ ಅಧಿಕ ತೂಕ ಹೊಂದಿದವರು.
೩) ಸ್ತ್ರೀ ಹಾಗೂ ಪುರುಷರಲ್ಲಿ ೧೨.೫ ಗ್ರಾಂ ಗಿಂತ ಅಧಿಕ ರಕ್ತ ಹೊಂದಿದವರು.
೪) ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿತ ಖಾಯಿಲೆ ಹೊಂದಿಲ್ಲದವರು.
೫) ಹೆಚ್ ಐ ವಿ / ಏಡ್ಸ, ಹೆಪಟೈಟಿಸ್ ಬಿ ಮತ್ತು ಸಿ ಭಾದಿತರು ರಕ್ತದಾನಮಾಡುವಂತಿಲ್ಲ.
೬) ೧ ವರ್ಷದ ಅವಧಿ ಒಳಗೆ ಖಾಮಾಲೆ ಚಿಕೆತ್ಸೆಹೂಂದಿ ಗುಣಮುಖರಾಗಿದ್ದರೂ ರಕ್ತದಾನಮಾಡುವಂತಿಲ್ಲಾ.
೭) ಯಾವುದೇ ತರಹದ ಚುಚ್ಚುಮದ್ದು ಹಾಕಿಕೊಂಡಿರಬಾರದು .
೮) ಶಸ್ತ್ರಚಿಕಿತ್ಸೆಗೆ ಒಳಗಾದವರು ರಕ್ತದಾನಮಾಡುವಂತಿಲ್ಲ.
೯) ಮದ್ಯಪಾನ ಮತ್ತು ಸಿಗರೇಟ್ ಸೇವಿಸಿರಬಾರದು.
೧೦) ಪ್ರತಿ ಸಲ ರಕ್ತದಾನ ಮಾಡುವಾಗ ಕನಿಷ್ಟ ೩ ತಿಂಗಳುಗಳ ಅಂತರವನ್ನು ಪಾಲಿಸಬೇಕು.

ರಕ್ತವನ್ನು ಯಾರಿಗೆ ಉಪಯೋಗಿಸಲಾಗುತ್ತದೆ?
೧) ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ.
೨) ಹಿಮೋಪಿಲಿಯಾ ರೋಗಿಗಳಿಗೆ.
೩) ಅಪಘಾತಕ್ಕೆ ತುತ್ತಾದವರಿಗೆ.
೪) ಹೃದಯ, ಮುತ್ರಪಿಂಡ ಶಸ್ತ್ರಚಿಕಿತ್ಸೆ ಅಥವಾ ಇನ್ನಿತರೆ ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗ.
೫) ಚಿಕ್ಕ ಮಕ್ಕಳ ಸಂಪೂರ್ಣ ರಕ್ತ ವರ್ಗಾವಣೆ ಮಾಡುವಾಗ.
೬) ಡಯಲಿಸಿಸ್ ಸಂದರ್ಭದಲ್ಲಿ
೭) ರಕ್ತದ ವಿಭಾಗೀಕರಣದಿಂದ ಔಷಧ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.
ಮುಂತಾದ ಸಂದರ್ಭಗಳಲ್ಲಿ ರಕ್ತವನ್ನು ಬಳಸಲಾಗುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ದೇಶದಲ್ಲಿರುವ ೧೩೦ ಕೋಟಿ ಜನರು ಈ ನಿಟ್ಟಿನಲ್ಲಿ ಜಾಗೃತರಾದರೆ ವಾರ್ಷಿಕವಾಗಿ ನಮಗೆ ಬೇಕಾಗಿರುವ ರಕ್ತದ ಅವಶ್ಯಕತೆಯನ್ನು ನಿರಾತಂಕವಾಗಿ ನೀಗಿಸಬಹುದಾಗಿದೆ. ರಕ್ತದ ಕೊರತೆಯಿಂದಾಗಿ ದಿನನಿತ್ಯ ಸಂಭವಿಸುವ ಸಾವು ನೋವುಗಳ ಅರಿವಾದಲ್ಲಿ ಜನರು ಜಾಗೃತರಾಗುವುದರಲ್ಲಿ ಎರಡು ಮಾತಿಲ್ಲ. ರಕ್ತದಾನ ಮಾಡುವುದರಿಂದಾಗುವ ಲಾಭವನ್ನು ಜನರಿಗೆ ಅರಿವು ಮೂಡಿಸಿ ಅವರನ್ನು ಸ್ವಯಂಪ್ರೇರಿತವಾಗಿ ರಕ್ತದಾನಿಗಳನ್ನಾಗಿ ಮಾಡುವುದರಿಂದ ನಾವು ಸದೃಢರಾಗಬಹುದು. ಇದರಿಂದ ದೇಶವನ್ನು ಪ್ರಬಲಗೊಳಿಸಬಹುದಾಗಿದೆ. ನಮ್ಮ ದೇಶದಲ್ಲಿ ಶೇಕಡಾ ೫೦ ರಿಂದ ೬೦ ರಷ್ಟು ಮಾತ್ರ ರಕ್ತದಾನ ಮಾಡುತ್ತಾರೆ. ರಕ್ತ ದಾನದಿಂದ ರಕ್ತ ತೆಗೆದುಕೊಳ್ಳುವವರು ಮತ್ತು ದಾನ ಮಾಡುವವರಿಗೂ ತುಂಬಾ ಲಾಭವಾಗುತ್ತದೆ. ರಕ್ತ ದಾನದ ಅರಿವನ್ನು ನಾವು ಟಿ.ವಿ, ರೇಡಿಯೂ, ಪತ್ರಿಕೆ ಮತ್ತು ರಕ್ತದಾನ ಶಿಬಿರಗಳಿಂದ ಮೂಡಿಸಲು ಪ್ರಯತ್ನಿಸಿದರೂ ನಾವು ಸ್ವಯಂ ಜಾಗೃತರಾದಾಗ ಮಾತ್ರ ಇದು ಸಾಧ್ಯ.

ಅರುಣ ಈ ನಾಗಣ್ಣವರ
ಜನಸಂಪರ್ಕ ಅಧಿಕಾರಿ
ಕೆ ಎಲ್ ಇ ಶತಮಾನೂತ್ಸವ ಚಾರಿಟೆಬಲ್ ಆಸ್ಪತ್ರೆ

https://pragativahini.com/belgaum-news/blood-donation-camp-as-part-of-dr-prabhakar-cores-birthday/

https://pragativahini.com/belgaum-news/blood-donation-program/