ಆನೆ ಬಲ ಮಿಸ್ ; ಮಹೇಶ್ ಔಟ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮೈತ್ರಿ ಸರಕಾರದ ಪರ ಮತ ಚಲಾಯಿಸದ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ಎನ್.ಮಹೇಶ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ವಿಶ್ವಾಸಮತದ ಸಂದರ್ಭದಲ್ಲಿ ಮೈತ್ರಿ ಸರಕಾರದ ಪರ ಮತ ಚಲಾಯಿಸುವಂತೆ ಮಹೇಶ್ ಗೆ ಪಕ್ಷ ಆದೇಶಿಸಿತ್ತು. ಆದರೆ ಮಹೇಶ ಸದನಕ್ಕೆ ಗೈರಾಗುವ ಮೂಲಕ ಪಕ್ಷದ ಆದೇಶ ಧಿಕ್ಕರಿಸಿದ್ದರು.
2 ದಿನಗಳ ಹಿಂದೆ ತಟಸ್ಥರಾಗಿರುವಂತೆ ತಮಗೆ ಮಾಯಾವತಿ ಸೂಚಿಸಿದ್ದಾರೆ ಎಂದು ಮಹೇಶ ಹೇಳಿಕೆ ನೀಡಿದ್ದರು. ಆದರೆ ಅದೇ ದಿನ ಸಂಜೆ ಸರಕಾರದ ಪರ ಮತ ಚಲಾಯಿಸುವಂತೆ ಅಧಿಕೃತ ಸೂಚನೆಯನ್ನು ಅವರಿಗೆ ನೀಡಲಾಗಿತ್ತು.
ಆದರೆ ಮಂಗಳವಾರ ಮಹೇಶ ಸದನಕ್ಕೆ ಬರಲೇ ಇಲ್ಲ. ಮಹೇಶ ಆರಂಭದಲ್ಲಿ ಸಚಿವರಾಗಿ ಕೂಡ ಕೆಲಸ ಮಾಡಿದ್ದರು. ಆದರೆ ಕೆಲವೇ ತಿಂಗಳಲ್ಲಿ ಅವರು ರಾಜಿನಾಮೆ ನೀಡಿದ್ದರು.
ಇದನ್ನೂ ಓದಿ-
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ