28 ಗ್ರಾಮಗಳ ರೈತರಿಗೆ BUDA ನೋಟಿಸ್ ಜಾರಿ: ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ರೈತರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ 28 ಗ್ರಾಮಗಳನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(BUDA) ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದ್ದು, ಇಲ್ಲಿನ ರೈತರಿಗೆ ಬುಡಾ ನೋಟಿಸ್ ಜಾರಿಗೊಳಿಸಿದೆ. ಇದರಿಂದಾಗಿ ಈ ಗ್ರಾಮಗಳ ರೈತರು ಹೊಸ ಬಡಾವಣೆಗಳು, ಕೈಗಾರೊಕೋದ್ಯಮಗಳಿಗಾಗಿ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.
ಕಣಬರ್ಗಿ ಈಗಾಗಲೇ ಬುಡಾ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಸ್ವಾಧೀನಗೊಂಡ ಭೂಮಿಯ ಪರಿಹಾರಕ್ಕಾಗಿ ರೈತರು ಹೈಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ಇದೀಗ ನೋಟಿಸ್ ಪಡೆದಿರುವ ಕಲಕಾಂಬ, ಮುಚ್ಚಂಡಿ, ಕಡೋಲಿ, ಸಾಂಬ್ರಾ, ಮುತಗಾ, ಬಾಳೇಕುಂದ್ರಿ, ಶಿಂಧೋಳಿ, ಕೊಂಡಸಕೊಪ್ಪ ಗ್ರಾಮಗಳ ರೈತರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಕ್ಷಣದಲ್ಲಿ ಬುಡಾ ತನ್ನ ನೋಟಿಸ್ ವಾಪಸ್ ಪಡೆಯದಿದ್ದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಭೂಸ್ವಾಧೀನದ ಆತಂಕ ಎದುರಿಸುತ್ತಿರುವ ರೈತರು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ