ಕೃಷಿ ಕ್ಷೇತ್ರದ ಅಭಿವೃದ್ಧಿಗೆ 16 ಅಂಶಗಳ ಯೋಜನೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2020-21ನೇ ಸಾಲಿನ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ವಲಯದ ಅಭಿವೃದ್ಧಿಗೆ 16 ಅಂಶಗಳ ಯೋಜನೆಗಳನ್ನು ಘೋಷಿಸಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.

ಕೃಷಿ ಉತ್ಪನ್ನಗಳ ಸಾಗಣೆಗೆ ಕಿಸಾನ್‌ ರೈಲು ಮತ್ತು ಕೃಷಿ ಉಡಾನ್‌ ಎಂಬ ವಿಭಿನ್ನ ಯೋಜನೆಗಳನ್ನು ಆರಂಭಿಸಲಾಗಿದೆ.

16 ಅಂಶಗಳ ಯೋಜನೆ:
* ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ
* ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ
* ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ
* ಸಮತೋಲಿತವಾಗಿ ರಸಗೊಬ್ಬರ ಬಳಕೆಗೆ ಉತ್ತೇಜನ
* ಕೃಷಿ ಮಳಿಗೆ, ಕೋಲ್ಡ್ ಸ್ಟೋರೇಜ್ ಇತ್ಯಾದಿ ಸಂಗ್ರಹಗಾರಗಳನ್ನು ಮ್ಯಾಪಿಂಗ್ ಮಾಡಲು ಅಥವಾ ಪರಸ್ಪರ ಕೊಂಡಿ ಏರ್ಪಡಿಸಲು ನಬಾರ್ಡ್ ಕ್ರಮ ಕೈಗೊಳ್ಳಲಿದೆ.6) ಗ್ರಾಮ ಸಂಗ್ರಹ ಯೋಜನೆ – ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಗ್ರಾಮದ ಮಹಿಳೆಯರಿಗೆ ಇದರ ಜವಾಬ್ದಾರಿ ನೀಡಲಾಗುತ್ತದೆ.
* ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಪ್ರಾರಂಭ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ವಿಮಾನ ಯೋಜನೆಯ ಅಳವಡಿಕೆ ಇರುತ್ತದೆ.
* ತೋಟಗಾರಿಕೆ ವಲಯದಲ್ಲಿ ಆಗುತ್ತಿರುವ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪನ್ನ ಪ್ರಮಾಣವನ್ನು ಮೀರಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ರೀತಿಯಲ್ಲಿ ಇದನ್ನು ಮಾರ್ಪಡಿಸಲಾಗುತ್ತದೆ.
* ಕೃಷಿ ಸಂಗ್ರಹಗಾರಗಳ ಸ್ವೀಕೃತಿಗಳನ್ನು ಇತರ ಇ-ಸೇವೆಗಳೊಂದಿಗೆ ಜೋಡಿಸಲಾಗುವುದು
* ಕೃಷಿ ಕ್ಷೇತ್ರಕ್ಕೆ 2021ರವರೆಗೆ 15 ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತದೆ.
* ಕುರಿ ಮತ್ತು ಮೇಕೆಗಳನ್ನು ಬಾಧಿಸುವ ಕಾಲುಬಾಯಿ ರೋಗವನ್ನು 2025ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕ್ರಮ
* 2025ರಷ್ಟರಲ್ಲಿ ಹಾಲಿನ ಉತ್ಪನ್ನವನ್ನು 53.5 ದಶಲಕ್ಷ ಮೆಟ್ರಿಕ್ ಟನ್​ನಿಂದ 103 ಮೆಟ್ರಿಲ್ ದಶಲಕ್ಷ ಟನ್​ಗಳಿಗೆ ಹೆಚ್ಚಿಸುವ ಗುರಿ
* ಮೀನುಗಾರಿಕೆ ವಲಯದಲ್ಲಿ ಯುವ ಸಮುದಾಯವನ್ನು ಭಾಗಿಯಾಗಿಸಲು ಕ್ರಮ. ಗ್ರಾಮೀಣ ಯುವಕರು ಸಾಗರ್ ಮಿತ್ರರಾಗಿ ಕಾರ್ಯ ನಿರ್ವಹಿಸುವ ಆಶಯ ಇದೆ. ಮೀನು ರೈತ ಸಂಘದ ಸ್ಥಾಪನೆಗೆ ಕ್ರಮ.
* ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಬಲಗೊಳಿಸಲಾಗುವುದು
* ಕೃಷಿಗೆ 2.83 ಲಕ್ಷ ಕೋಟಿ ವಿನಿಯೋಗ
* ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ವಿನಿಯೋಗ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button