Kannada NewsLatest

ಎಮ್ಮೆ ಕಳವು ಪ್ರಕರಣ: ಮತ್ತೋರ್ವನ ಬಂಧನ

ಪ್ರಗತಿವಾಹಿನಿ ಸುದ್ದಿ, ಅಗಸಗಿ:

ಅಗಸಗಿ ಎಮ್ಮೆ ಕಳ್ಳವು ಪ್ರಕರಣಕ್ಕೆ ಸಂಭಂದಿಸಿದಂತೆ ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು , 3 ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಆರೋಪಿಗಳು ಅಗಸಗಿ ಪಕ್ಕದ ಮಣ್ಣಿಕೇರಿ ಗ್ರಾಮದವರು.

Home add -Advt

ಶೆಟ್ಟು ರಾಮಾ ಸನದಿ (24), ವಿಶಾಲ ವಿಷ್ಣು ಕಲಖಾಂಬಕರ (19), ಸಂತೋಷ ಭರಮಾ ಕಜುಗುನಟ್ಟಿ (29) ಬಂಧಿತರು.

ಎಮ್ಮೆ ಕಳವು ಮಾಡಿ ಸುತಗಟ್ಟಿ ಗ್ರಾಮದ ದಲ್ಲಾಳಿಗೆ 40 ಸಾವಿರ ರೂ ಗೆ ಮಾರಾಟ ಮಾಡಿದ್ದರು.
ಒಟ್ಟು 5 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಪ್ರಕರಣವನ್ನು ಗಂಭಿರವಾಗಿ ತೆಗೆದುಕೊಂಡಿರುವ ಡಿಸಿಪಿ ಯಶೋಧಾ ವಂಟಗೋಡಿ, ತಲೆ ಮರಿಸಿಕೊಂಡಿರುವ ಆರೋಪಿಗಳನ್ನು ಬಂಧಿಸುವಂತೆ ಕಾಕತಿ ಸಿಬ್ಬಂದಿಗೆ ಖಡಕ್ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.

ವಶಕ್ಕೆ ಪಡೆದ ಎಮ್ಮೆಗಳನ್ನು ಅಗಸಗಿ ಗ್ರಾಮ ಸದಸ್ಯ ಅಪ್ಪಯ್ಯಗೌಡ ಪಾಟೀಲ ಅವರ ಸಮ್ಮುಖದಲ್ಲಿ ಪ್ರಿಯಾ ಸೋಮನಟ್ಟಿಗೆ ಹಸ್ತಾಂತರಿಸಲಾಯಿತು .
ಈ ಸಂದರ್ಭದಲ್ಲಿ ಕಾಕತಿ ಪೊಲೀಸ್ ಸಿಪಿಐ ಎಲ್ ಎಚ್ ಗೌಂಡಿ , ಪಿಎಸ್ಐ ಅರ್ಜುನ ಹಂಚಿನಮನಿ, ಮುಖ್ಯ ಪೇದೆಗಳಾದ ಅಡಿವೆಪ್ಪಾ ಕುಂಡೆದ, ಎಚ್ ಸಿ ನಾಗನ್ನವರ, ಲಮಾಣಿ, ಪೇದೆಗಳಾದ ಸಂತೋಷ ಚಿನ್ನಣ್ಣವರ, ಉಪ್ಪಾರಟ್ಟಿ, ಮುನ್ಯಾಳ , ಬೋವಿ ಸೇರಿ ಹಲವರು ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Related Articles

Back to top button