ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ:
ಹೊಟೆಲ್ ನಲ್ಲಿ ಜಹಾ ಕುಡಿಯಲು ಬಂದ ಮೂವರು ಯುವಕರು ಸಪ್ಲೈರನನ್ನು ಥಳಿಸಿ ಹೋಗುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಹವಾಲ್ದಾರಗೆ ಕುಡುಕರು ಅವಾಜ್ ಹಾಕಿದ್ದಾರೆ.
ಪಟ್ಟಣದ ಗುರುವಾರ ಪೇಠೆಯ ಪೋಲಿಸ್ ಠಾಣೆ ಎದುರುಗಡೆ ಇರುವ ಹೊಟೇಲಿನ ಸಪ್ಲ್ಯರನನ್ನು ವಿನಾಕಾರಣ ಥಳಿಸಿಲು ಪ್ರಾರಂಭಿಸಿದರು. ಮಾಲಕ ಬಿಡಿಸಲು ಹೋದರೆ ಮಾಲಕನನ್ನೂ ಎಳೆದಾಡಿದರು. ಮಾಲಕ ಪೋಲಿಸ್ ಠಾಣೆಗೆ ಹೋಗಿ ದೂರುನೀಡಿದ್ದರಿಂದ ಠಾಣೆಯಲ್ಲಿದ್ದ ಹವಾಲ್ದಾರ ಎಲ್ ಹೆಚ್ ನಾಯ್ಕರ ಬಂದು ಜಗಳ ಬಿಡಿಸಲು ಮುಂದಾದಾಗ ಕುಡುಕರು ಹವಾಲ್ದಾರ ಮೇಲೆ ಹಲ್ಲೆ ನಡೆಸಲು ಮುಂದಾದರು. ಇದನ್ನು ಕಂಡ ಸಾರ್ವಜನಿಕರು ಕುಡುಕರಿಗೆ ಥಳಿಸಿ ಠಾಣೆಗೆ ಒಪ್ಪಿಸಿದರು.
ಆರೋಪಿಗಳಾದ ಸಮೀಪದ ಗುಡಿಕೊಟಬಾಗಿಯ ಮಹೇಶ ಕಂಬಳಿ, ಮಂಜುನಾಥ ಕಂಬಳಿ, ಸೇರಿದಂತೆ ಮೂವರ ವಿರುದ್ದ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.