Belagavi NewsBelgaum NewsKannada NewsKarnataka News

*ರಭಸವಾಗಿ ಗುದ್ದಿದ ಬುಲೇರೋ: ಪಾದಾಚಾರಿ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ವಾಯು ವಿಹಾರ ಮಾಡುತ್ತಿಸ ಪಾದಾಚಾರಿಗೆ ಬುಲೇರೋ ವಾಹನ ರಭಸವಾಗಿ ಗುದ್ದಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.‌ ನಗರದ ಮಹಾತ್ಮಾ ಫುಲೆ ರಸ್ತೆಯಲ್ಲಿ ಘಟನೆ ನಡೆದಿದೆ.

ಬೆಳಗಾವಿಯ ಶಾಸ್ತ್ರಿನಗರ ನಿವಾಸಿ ಶ್ರೀಧರ ಪವಾರ್ (43) ಮೃತ ದುರ್ದೈವಿಯಾಗಿದ್ದಾನೆ. ವೇಗವಾಗಿ ಬಂದ ಬುಲೇರೋ ಶ್ರೀಧರಗೆ ಗುದ್ದಿ ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

Home add -Advt

ತೀವ್ರ ಅಸ್ವಸ್ಥಗೊಂಡಿದ್ದ ಶ್ರೀಧರ ಪವಾರ್‌ರನ್ನು ಖಾಸಗಿ ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಪಾದಚಾರಿ ಶ್ರೀಧರ ಪವಾರ ಸಾವನಪ್ಪಿದ್ದಾನೆ. ದಕ್ಷಿಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Related Articles

Back to top button