Kannada NewsKarnataka News

ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನ

ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ‌ಕಿತ್ತೂರು :
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವರ್ಶಿನಿ ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನವಾಗಿದೆ.
ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಯ ಮ್ಯಾನೇಜರ್ ಹಾಗೂ ಸಿಬ್ಬಂದಿ  ಮಧ್ಯರಾತ್ರಿ 12ಗಂಟೆಗೆ ಮನೆಗೆ ತೆರೆಳಿದ್ದಾರೆ.  ಕಳ್ಳರು ಮಧ್ಯರಾತ್ರಿ 12.50 ಕ್ಕೆ ಬಿಲ್ಡಿಂಗ್ ಮೇಲಿನಿಂದ ಕಬ್ಬಿಣದ ಬಾಗಿಲು ಮುರಿದು ಕೆಳಗಡೆ ಬಂದಿದ್ದಾರೆ.  ಒಳಗಡೆ ಇದ್ದ ಇನ್ನೊಂದು ಬಾಗಿಲನ್ನು ಮುರಿದು,1.10 ಕ್ಕೆ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.
ಅಂದಾಜು 1.30 ಲಕ್ಷ ರೂ. ದೊಚ್ಚಿಕೊಂಡು ಹೋಗಿದ್ದಾರೆ ಎಂದು ಬಾರ್ ಮಾಲಿಕ ಪ್ರೀತಂ ಕಲಾಲ(ಕಾಂಬ್ಳೆ)  ಮಾಹಿತಿ ನೀಡಿದ್ದಾರೆ.
 ಸ್ಥಳಕ್ಕೆ ಸಿಪಿಐ ಶ್ರೀಕಾಂತ ತೋಟಗಿ, ಬೆರಳಚ್ಚು ತಜ್ಞರು, ಶ್ವಾನದಳ ತಂಡ ಹಾಗೂ ಪೋಲಿಸ್ ಸಿಬ್ಬಂದಿ  ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button