ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಹಲಕುಂದಿ ಬಳಿ ನಡೆದಿದೆ.
ಎಮ್ಮಿಗನೂರಿನ ಕನಕರಾಜು (19) ಮುರುಡಿ ಗ್ರಾಮದ ಶಂಕರ (18) ನಾಗೇನಹಳ್ಳಿಯ ಹೊನ್ನೂರ (22) ಮೃತ ವಿದ್ಯಾರ್ಥಿಗಳು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ರಸ್ತೆ ಕ್ರಾಸ್ ಮಾಡುವಾಗ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಬೆಂಗಳೂರಿನಿಂದ ಜೇವರ್ಗಿಯತ್ತ ಸಾಗುತ್ತಿದ್ದ ಬಸ್ ವಿದ್ಯಾರ್ಥಿಗಳ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೂವರು ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಬಳ್ಳಾರಿ ಹಾಸ್ಟೇಲ್ ಬಿಟ್ಟು ಹೋಗಿದ್ದರು.
ಅಪಘಾತದಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಂತೆ ಹಾಸ್ಟೇಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಹಾಸ್ಟೇಲ್ ನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಬೆಳಗಾವಿಗೆ ನುಗ್ಗಲು ಯತ್ನ; ಮಹಾ ವಿಕಾಸ ಅಗಾಡಿ ಕಾರ್ಯಕರ್ತರನ್ನು ತದೆದ ಪೊಲೀಸರು*
https://pragati.taskdun.com/maha-vikasa-agadhiprotestbelagavimes-maha-melav/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ