
ಪ್ರಗತಿವಾಹಿನಿ ಸುದ್ದಿ; ತುಮಕೂರು: ಪಾವಗಡದ ಪಳವಳ್ಳಿ ಕಟ್ಟೆಯಲ್ಲಿ ನಿನ್ನೆ ನಡೆದಿದ್ದ ಬಸ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಇಬ್ಬರು ಅಕ್ಕ-ತಂಗಿಯರು ಬಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಬೆಳಿಗ್ಗೆ ತುಮಕೂರಿನ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ದುರಂತ ಸಂಭವಿಸಿತ್ತು. ಅಪಘಾತದ ಸ್ಥಳದಲ್ಲಿಯೇ ತಂಗಿ ಅಮೂಲ್ಯ ಸಾವನ್ನಪ್ಪಿದ್ದಳು. ಘಟನೆಯಲ್ಲಿ ಕಾಲು ಮುರಿತಕ್ಕೊಳಗಾಗಿದ್ದ ಅಕ್ಕ ಹರ್ಷಿತಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡ ರಾತ್ರಿ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ತಂಗಿ ಅಮೂಲ್ಯ ಪಿಯು ಓದುತ್ತಿದ್ದರೆ, ಅಕ್ಕ ಹರ್ಷಿತಾ ಪದವಿ ಓದುತ್ತಿದ್ದಳು. ಇಬ್ಬರು ಕಾಲೇಜಿಗೆ ಹೋಗಲೆಂದು ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದರು. ಪಳವಳ್ಳಿ ಕಟ್ಟೆ ಬಳಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು. ಇದೀಗ ಗಾಯಾಳು ಹರ್ಷಿತಾ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ಆಕ್ರಂದನ ಮುಗಿಲುಮುಟ್ಟಿದೆ.
ಬಸ್ ಅಪಘಾತ ಪ್ರಕರಣ; ಪರಾರಿಯಾಗಿದ್ದ ಚಾಲಕ ಅರೆಸ್ಟ್; ಎಫ್ ಐ ಆರ್ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ