
ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ಬಸ್ ನಲ್ಲಿಯೇ ಕಂಡಕ್ಟರ್ ಓರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಫರಹತಾಬಾದ್ ನಲ್ಲಿ ನಡೆದಿದೆ.
50 ವರ್ಷದ ಕಾಶಿನಾಥ್ ಮೃತ ಕಂಡಕ್ಟರ್. ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದವರು. ಕಲಬುರಗಿಯಿಂದ ಜೇವರ್ಗಿಗೆ ತೆರಳುತ್ತಿದ ಬಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಡಕ್ಟರ್ ಕಾಶಿನಾಥ್ ಅವರಿಗೆ ಮಾರ್ಗ ಮಧ್ಯೆಯೇ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತ ಸಂಭವಿಸಿದೆ.
ತಕ್ಷಣ ಪ್ರಯಾಣಿಕರ ಸಹಾಯದಿಂದ ಬಸ್ ನ್ನೇ ಆಸ್ಪತ್ರೆಗೆ ಕರೆದೊಯ್ದು ಕಂಡಕ್ಟರ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಕಾಶಿನಾಥ್ ಅವರು ಕೊನೆಯುಸಿರೆಳೆದಿದ್ದರು.