ಹಠಾತ್ ಪ್ರತಿಭಟನೆಗಿಳಿದ ಪ್ರಯಾಣಿಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರತಿದಿನ ರಾತ್ರಿ ಬೈಲಹೊಂಗಲಕ್ಕೆ ಬಸ್ ಬಿಡಲು ವಿಳಂಬ ಮಾಡುವ ಧೋರಣೆ ಖಂಡಿಸಿ ಇಂದು ರಾತ್ರಿ ಪ್ರಯಾಣಿಕರು ಹಠಾತ್ ಪ್ರತಿಭಟನೆಗಿಳಿದರು.
ಕಳೆದ ಹಲವು ದಿನಗಳಿಂದ ತಾಳ್ಮೆಯಿಂದ ಸಹಿಸಿಕೊಂಡಿದ್ದ ಪ್ರಯಾಣಿಕರು ಇಂದು ಆಕ್ರೋಶಭರಿತರಾಗಿದ್ದರು. ರಾತ್ರಿ 7 ಗಂಟೆಯ ನಂತರ ಬೈಲಹೊಂಗಲಕ್ಕೆ ಬಸ್ ಬಿಡುತ್ತಿಲ್ಲ. ಮತ್ತೆ ಬಸ್ ಬಿಡುವುದು 9.30ರ ನಂತರವೇ. ಉದ್ದೇಶಪೂರ್ವಕವಾಗಿಯೇ ಈ ರೀತಿಯ ಧೋರಣೆ ಅನುಸರಿಸಲಾಗುತ್ತಿದೆ ಎನ್ನುವುದು ಪ್ರಯಾಣಿಕರ ಅಸಮಾಧಾನ.
ಬಸ್ ನಿಲ್ದಾಣದಿಂದ ಯಾವುದೇ ಬಸ್ ಹೊರಗೆ ಹೋಗದಂತೆ ಪ್ರಯಾಣಿಕರು ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ನಂತರ ಬಸ್ ವ್ಯವಸ್ಥೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ