Kannada NewsKarnataka NewsLatest

*ತಪ್ಪಿದ ಭಾರಿ ಅನಾಹುತ: ಗದ್ದೆಗೆ ನುಗ್ಗಿದ ಬಸ್*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಜಮೀನಿಗೆ ನುಗ್ಗಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇವಿನಗರದ ಬಳಿ ನಡೆದಿದ್ದು, ಯಾವುದೇ ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.‌

Home add -Advt

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಆಗಿದ್ದು, ಕೆಎ 34 ಎಫ್ 1320 ಸಂಖ್ಯೆ ಬಸ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದೆ ಸರ್ಕಾರಿ ಬಸ್ ಜಮೀನಿಗೆ ನುಗ್ಗಿದರಿಂದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಅಪಘಾತ ನಡೆಯುತ್ತಿದಂತೆ, ಪ್ರಯಾಣಿಕರು ಬಸ್ ನಿಂದ ಹೊರ ಬಂದು ಅಪಘಾತ ಆಗಿದ್ದರಿಂದ ಅಚ್ಚರಿ ವ್ಯಕ್ತಿಪಡಿಸಿದ್ದಾರೆ.‌

ಅಪಘಾತದಲ್ಲಿ ಕೆಲವೊಬ್ಬರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಪಘಾತ ನಡೆಯುತ್ತಿದ್ದಂತೆ ಅದೆ ಮಾರ್ಗವಾಗಿ ಪ್ರಯಾಣಿಸುತ್ತಿದ ಜನರು ಅಪಘಾದಲ್ಲಿ ಗಾಯಗೊಂಡವರನ್ನು ಉಪಚರಿಸಿದ್ದಾರೆ. ಅಪಘಾತದಲ್ಲಿ ಅದೃಷ್ಟಾವಶಾತ್ ಸರ್ಕಾರಿ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Back to top button