*ಉದ್ಯಮಿಗೆ ಹನಿಟ್ರ್ಯಾಪ್; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದಂಪತಿ ಹಾಗೂ ಗ್ಯಾಂಗ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಗಂಡ-ಹೆಂಡತಿ ಹಾಗೂ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ಬೆಂಗಳೂರಿನ ಆರ್.ಆರ್.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದೆ.
ಉದ್ಯಮಿ ಉದ್ಯಮಿ ಅತಿವುಲ್ಲಾ ಎಂಬುವವರನ್ನು ಹನಿಟ್ರ್ಯಾಪ್ ಮಾಡಿದ್ದ ದಂಪತಿ, 6 ಲಕ್ಷಕ್ಕೆ ಬೇಡಿ ಇಟ್ಟಿದ್ದರು. ಇದೇ ವೇಳೆ ದಾಳಿ ನಡೆಸಿದ ಪೊಲೀಸರು ಗ್ಯಾಂಗ್ ನ್ನು ಬಂಧಿಸಿದ್ದಾರೆ.
ಬಂಧಿತರನ್ನು ಖಲೀಮ್, ಸಭಾ, ಓಬೆದ್ ರಕಿಂ, ಅತೀಕ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಖಲೀಮ್ ಹಾಗೂ ಸಭಾ ಇಬ್ಬರೂ ಗಂಡ-ಹೆಂಡತಿ. ಖಲೀಮ್ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಉದ್ಯಮಿಗೆ ಪರಿಚಯ ಮಾಡಿಸಿದ್ದ. ಸಭಾ ಆರ್.ಅರ್.ನಗರದಲ್ಲಿ ರೂಮ್ ಬುಕ್ ಮಾಡಲು ಉದ್ಯಮಿಯನ್ನು ಕರೆದಿದ್ದಳು. ಆಧಾರ್ ಕಾರ್ಡ್ ಜೊತೆ ಬರುವಂತೆ ಉದ್ಯಮಿ ಅತಿವುಲ್ಲಾಗೆ ತಿಳಿಸಿದ್ದಳು. ರೂಮ್ ಬುಕ್ ಮಾಡಿದ ಕೆಲ ಹೊತ್ತಲ್ಲೇ ಗ್ಯಾಂಗ್ ನ ಇತರ ಆರೋಪಿಗಳು ಎಂಟ್ರಿ ಕೊಟ್ಟು ಸೀನ್ ಕ್ರಿಯೆಟ್ ಮಾಡಿ ಹಣಬ್ಬೆ ಬೆಡಿಕೆ ಇಟ್ಟಿದ್ದಾರೆ.
ಈ ವಿಚರವೆಲ್ಲವನ್ನೂ ನಿಮ್ಮ ಮನೆಯವರಿಗೆ ತಿಳಿಸುತ್ತೇವೆ ಎಂದು ಹೇಳಿ 6 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ರೂಮಿನ ಮೇಲೆ ದಾಳಿ ನಡೆಸಿದ್ದಾರೆ. ಹನಿಟ್ರ್ಯಾಪ್ ಗ್ಯಾಂಗ್ ನ ಗಂಡ-ಹೆಂಡತಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ