Latest

ತಾನು ಮದುವೆಯಾಗದೇ, ಯುವತಿಗೂ ಮದುವೆಯಾಗಲು ಬಿಡದ ಉದ್ಯಮಿ; ಬೇಸತ್ತ ಕುಟುಂಬದಿಂದ ಘೋರ ಕೃತ್ಯ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಉದ್ಯಮಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಿಯತಮನೊಂದಿಗೆ ವಿವಾಹವಾಗಲು ವಿರೋಧಿಸಿ ಅಡ್ಡಿಪಡಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿ ತನ್ನ ಪ್ರಿಯಕರ ಹಾಗೂ ತಾಯಿ ಜೊತೆ ಸೇರಿ ಉದ್ಯಮಿಯನ್ನೇ ಹತ್ಯೆಗೈದಿದ್ದಳು ಎಂಬ ಸಂಗತಿ ಬಯಲಾಗಿದೆ.

ನೀರಜ್ ಗುಪ್ತಾ ಹತ್ಯೆಯಾಗಿದ್ದ ಉದ್ಯಮಿ. ಫೈಸಾಲಾ ಎಂಬಾಕೆ ನೀರಜ್ ಒಡೆತನದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳಲ್ಲದೇ ನೀರಜ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಫೈಸಾಲಾ ವಿವಾಹ ಆಕೆಯ ಪ್ರಿಯತಮನೊಂದಿಗೆ ನಿಶ್ಚಯವಾಗಿತ್ತು. ಆದರೆ ನೀರಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ.

ಫೈಸಾಲಾ ನೀರಜ್ ನನ್ನು ಮನೆಗೆ ಕರೆದು ತನ್ನ ಪ್ರಿಯತಮ, ತಾಯಿ ಜೊತೆ ಸೇರಿ ಇಟ್ಟಿಗೆಯಿಂದ ಹೊಡೆದು ನೀರಜ್ ನನ್ನು ಹತ್ಯೆಗೈದಿದ್ದರು. ಬಳಿಕ ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ ನಲ್ಲಿ ತುಂಬಿಸಿ, ರೈಲಿನಲ್ಲಿ ಕೊಂಡೊಯ್ದು, ರಾಜಸ್ಥಾನದ ಭರೂಚಾ ಪ್ರದೇಶದಲ್ಲಿ ಎಸೆದಿದ್ದರು.

Home add -Advt

Related Articles

Back to top button