Latest

ಕೆಲವೇ ಗಂಟೆಗಳಲ್ಲಿ ಉಪಚುನಾವಣಾ ಫಲಿತಾಂಶ, ನಾಯಕರಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬೆಂಗಳೂರು: ಮುಂದಿನ ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿ ಉಪಚುನಾವಣೆ ಫಲಿತಾಂಶ ನಿರೀಕ್ಷಿಸಲಾಗಿದೆ. ದೇಶದೆಲ್ಲರ ಚಿತ್ತ ಈಗ ಕರ್ನಾಟದ ಮೇಲೆ ನೆಟ್ಟಿದೆ. ಸಮಯ ಸಮೀಪಿಸುತ್ತಿದ್ದಂತೆ ನಾಯಕರ ಉದ್ವೇಗ ಹೆಚ್ಚಾಗುತ್ತಿದೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೊಂದೆಡೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖ್ಯಸ್ಥ ದೇವೇಗೌಡ ಶಿರಡಿಗೆ ಭೇಟಿ ನೀಡಿ ಸಾಯಿನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Related Articles

ಈ ತಿಂಗಳ ಐದರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. 66.25% ಮತದಾನ ದಾಖಲಾಗಿದೆ. 224 ಸ್ಥಾನಗಳ ಕರ್ನಾಟಕ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ವಿರುದ್ಧ ಮೊಕದ್ದಮೆ ಹೂಡಿದ್ದರಿಂದ ಎರಡು ಕ್ಷೇತ್ರಗಳಲ್ಲಿ ಚುನಾವಣಾ ನಡೆದಿಲ್ಲ..

ಇನ್ನು ಉಳಿದ 222 ಸ್ಥಾನಗಳಲ್ಲಿ ಮ್ಯಾಜಿಕ್ ಸಂಖ್ಯೆ 112. ಪ್ರಸ್ತುತ  ಬಿಜೆಪಿ 105 ಶಾಸಕರ ಬಲವನ್ನು ಹೊಂದಿದೆ. ಸ್ಪೀಕರ್ ಜೊತೆಗೆ ಮತ್ತೊಬ್ಬ ಸ್ವತಂತ್ರ ಶಾಸಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಸೋಮವಾರದ ಉಪ ಚುನಾವಣಾ ಫಲಿತಾಂಶದಲ್ಲಿ ಕನಿಷ್ಠ ಆರು ಶಾಸಕರನ್ನು ಗೆದ್ದರೆ ಬಿಜೆಪಿಗೆ ಬಹುಮತ ಇರುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ಸರ್ಕಾರ ಅತಂತ್ರದಲ್ಲಿ ಸಿಲುಕಲಿದೆ.

Home add -Advt

ಪ್ರಸ್ತುತ, ಕಾಂಗ್ರೆಸ್ ಪಕ್ಷವು 66 ಮತ್ತು ಜೆಡಿಎಸ್ 34 ಶಾಸಕರನ್ನು ಹೊಂದಿದೆ. 14 ಕಾಂಗ್ರೆಸ್ ಮತ್ತು ಮೂವರು ಜೆಡಿಎಸ್ ಸದಸ್ಯರ ರಾಜೀನಾಮೆಯೊಂದಿಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕುಸಿಯ ಬೇಕಾಯಿತು.. ಈ ನಡುವೆ ತಕ್ಷಣ ರಾಜೀನಾಮೆ ನೀಡಿದ ಸದಸ್ಯರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಇದೇ ಕಾರಣಕ್ಕೆ ಉಪಚುನಾವಣೆ ಅನಿವಾರ್ಯವಾಯಿತು.

Related Articles

Back to top button