Election NewsKarnataka NewsLatestPolitics

*ಉಪಚುನಾವಣೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಮತದಾನ ಆರಂಭ*

ಪ್ರಗತಿವಾಹಿನಿ ಸುದ್ದಿ: ಇಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾನ ಆರಂಭವಾಗಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದೆ. ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನ ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಗಲಕೋಟೆ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳಿದ್ದಾರೆ.

ಬಾಗಲಕೋಟೆಯಲ್ಲಿ ಒಟ್ಟು 2ಲಕ್ಷದ 59 ಸಾವಿರದ 797 ಮತದಾರರಿದ್ದರೆ, ದಾವಣಗೆರೆಯಲ್ಲಿ 2ಲಕ್ಷದ 31 ಸಾವಿರದ 72 ಮತದಾರರಿದ್ದಾರೆ. ಬಾಗಲೋಟೆಯಲ್ಲಿ 1ಲಕ್ಷದ 26ಸಾವಿರದ 999 ಪುರುಷ ಮತದಾರರಿದ್ರೆ, ದಾವಣಗೆರೆಯಲ್ಲಿ 1ಲಕ್ಷದ 13 ಸಾವಿರದ 399 ಮತದಾರರಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ 1ಲಕ್ಷದ 32ಸಾವಿರದ 775 ಮಹಿಳಾ ಮತದಾರರಿದ್ದು, ದಾವಣಗೆರೆಯಲ್ಲಿ 1ಲಕ್ಷದ 17 ಸಾವಿರದ 690 ಮಹಿಳಾ ಮತದಾರರಿದ್ದಾರೆ.

Home add -Advt

Related Articles

Back to top button