Belagavi NewsBelgaum NewsCrimeKannada News

*ಗಾಂಜಾ ಮಾರಾಟ: 3 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವಕ ಯುವತಿಯರನ್ನು ಟಾರ್ಗೇಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ರಾಜು ಗಂಗಾಧರ ನಾಯಿಕ (29), ಪೃತ್ವಿರಾಜ ಆನಂದ ಕದಮ (24) ಹಾಗೂ ಪ್ರೇಮನಾಥ @ ಸೂರಜ ವಿಠಲ ಕುಂಡೆಕರ. ಈ ಮೂರು ಜನ ಆರೋಪಿತರು ಭರತೇಶ ಕಾಲೇಜ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುವಾಗ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಹುಸೇನಸಾಬ ಕೆರೂರ ಹಾಗೂ ಸಿಬ್ಬಂದ ದಾಳಿ ಮಾಡಿದ್ದಾರೆ.‌ ದಾಳಿ ವೇಳೆ ಆರೋಪಿತಗಳಿಂದ  29,500 ಮೌಲ್ಯದ 1 ಕೆಜಿ 190 ಗ್ರಾಮ್ ಗಾಂಜಾ ವಶಪಡಿಸಿಕೊಳ್ಳಾಗಿದೆ. 

ವಿಚಾರಣೆ ವೇಳೆ ಆರೋಪಿಗಳಾದ ಯೇಸುನಂದ ಪ್ರಾನ್ಸಿಸ್ ಸೌಜ್ ಹಾಗೂ ನೌಶಾಧ ಸನದಿ ಇವರಿಂದ ಗಾಂಜಾ  ತಂದಿರುವುದಾಗಿ ಬಂದಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹಾಗಾಗಿ 5 ಜನ ಆರೋಪಿಗಳ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರ ಸಂಖ್ಯೆ. 70/2026 ಕಲಂ. 20(b) (ii) B ಎನ್‌ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿದ್ದು. ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

ಮೇಲಿನ ಪ್ರಕರಣದಲ್ಲಿ ಆರೋಪಿತರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ ಪಿಎಸ್‌ಐ, ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button