Latest

ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು; ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಕಾಂಗ್ರೆಸ್ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಬಿಜೆಪಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರು ಎಂತಹ ನಾಟಕವಾಡುತ್ತಿದ್ದಾರೆ ಒಮ್ಮೆ ಎತ್ತಿನ ಗಾಡಿಯಲ್ಲಿ ಬರುತ್ತಾರೆ, ಒಮ್ಮೆ ಸೈಕಲ್ ನಲ್ಲಿ ಬರುತ್ತಾರೆ. ಒಬ್ಬರ ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ… ನಿನ್ನೆ ಸಿದ್ದರಾಮಣ್ಣ ಬೆಂಜ್ ಕಾರಿನಲ್ಲಿ ಬಂದರು. ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು. ಬೆಂಜ್ ಕಾರಿನಲ್ಲಿ ಬರುವ ನಾಯಕರಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಆರಂಭವಾಗಿರುವ ಪಿಸುಮಾತಿಗೆ ಕಾರಣ ಗೊತ್ತೇ? ಸೋನಿಯಾ ಗಾಂಧಿಯವರು ಸಿದ್ದರಾಮಯ್ಯನವರನ್ನು ದೆಹಲಿಗೆ ಬರುವಂತೆ ಹೇಳಿದರು. ಆದರೆ ಇಲ್ಲೇ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹೊರಟ ಸಿದ್ದರಾಮಯ್ಯ ಪಿಸುಮಾತು ಶುರುಮಾಡಿದ್ದಾರೆ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಸಲೀಂ ಹಾಗೂ ಉಗ್ರಪ್ಪ ಅವರ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು. ಕಾಂಗ್ರೆಸ್ ಮುಗಿಸಲು ಬೇರೆ ಯಾರೂ ಬೇಕಾಗಿಲ್ಲ, ಪಕ್ಷದಲ್ಲಿರುವವರೇ ಸಾಕು ಎಂದು ಟೀಕಿಸಿದರು.

ಸಿ.ಎಂ.ಉದಾಸಿ 4 ದಶಕಗಳ ಕಾಲ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಅವರಿಗೆ ಸಾಟಿ ಬೇರೆ ಯಾರೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರವನ್ನೂ ಪೂರ್ಣವಾಗಿ ನೋಡಿಲ್ಲ, ದೊಡ್ಡ ಸಾಧನೆ ಮಾಡಿದ್ದೇನೆ ಎನ್ನುವಂತೆ ಕ್ಷೇತ್ರದ ಜನರ ಬಳಿ ಬಂದು ಮತ ಕೇಳುತ್ತಿದ್ದಾರೆ ಇಂತವರನ್ನು ಎಷ್ಟು ನೋಡಿಲ್ಲ ಹೇಳಿ? ಎಂದರು.

ಪ್ರಧಾನಿ ಕನಸು ಕಾಣುತ್ತಿರುವ ‘ಹೆಬ್ಬಟ್ಟು’ ಗಿರಾಕಿ; ಅವರ ಬಗ್ಗೆಯೂ ಹೀಗೆ ಮಾತನಾಡುತ್ತೀರಾ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button