Latest

ಉಪಚುನಾವಣೆ: 35ಕ್ಕೂ ಹೆಚ್ಚು ಶಿಕ್ಷಕರು ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನಡೆದ ಉಪಚುನಾವಣೆ ಶಿಕ್ಷಕರ ಕುಟುಂಬಗಳನ್ನೇ ಮೃತ್ಯುಕೂಪಕ್ಕೆ ತಳ್ಳಿದ ಘಟನೆಗೆ ಸಾಕ್ಷಿಯಾದಂತಾಗಿದೆ. ಉಪಚುನಾವಣಾ ಕರ್ತವ್ಯಕ್ಕೆ ಹಾಜರಾದ 35ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆ ಹಾಗೂ ನಗರಸಭೆ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದ ಬಹುತೇಕ ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 35ಕ್ಕೂ ಹೆಚ್ಚು ಶಿಕ್ಷಕರು ಸೋಂಕಿಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 16 ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದರೆ, ಬೆಳಗಾವಿ, ಮಸ್ಕಿ ಹಾಗೂ ನಗರಸಭೆ ಚುನಾವಣೆಯಲ್ಲಿ ಎಲೆಕ್ಷನ್ ಡ್ಯೂಟಿಗೆ ಹಾಜರಾಗಿದ್ದ 18ಕ್ಕು ಹೆಚ್ಚು ಶಿಕ್ಷಕರು ಮಹಾಮಾರಿಗೆ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.

ಶಿಕ್ಷಕರಾದ ಎಸ್.ಎಸ್ ಭರಾಟೆ (42), ರವಿಂದ್ರನಾಥ ಬಶಟ್ಟಿ (58), ಸಂಗಪ್ಪ ವಾನೆ (43) ರಾಜೇಶ್ವರಿ (41), ಶ್ರೀದೇವಿ (52), ಪ್ರಕಾಂಶ್ ಮಂತ್ರೆ (36), ಶಿವಕುಮಾರ್ ಭಾವು (53) ನರೇಂದ್ರ ಪಾಟೀಲ್ (47), ಪ್ರಕಾಶ್ ಲಕ್ಕಶೆಟ್ಟಿ (54), ಚಂದ್ರಶೇಖರ್ ಗಚ್ಚಿಮಠ (51) ಸೇರಿದಂತೆ ಹಲವು ಶಿಕ್ಷಕರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ ಎನ್ನಲಾಗಿದೆ.

ಬೆಳಗಾವಿ ಉಪ ತಹಶೀಲ್ದಾರ್ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button