Kannada NewsKarnataka News

ಅ.28 ರಂದು ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಅಕ್ಟೋಬರ್ ೨೮ ರಂದು ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅಧಿಸೂಚನೆ ಹೋರಡಿಸಿದ್ದಾರೆ.

ಖಾಲಿ ಸ್ಥಾನಗಳಾದ ರಾಮದುರ್ಗ ಪುರಸಭೆ ವಾರ್ಡ ನಂಬರ್ ೦೯(ಹಿಂದುಳಿದ ವರ್ಗ ಬ) ಹಾಗೂ ಸದಲಗಾ ಪುರಸಭೆಯ ವಾರ್ಡ್ ನಂಬರ್ ೦೫(ಹಿಂದುಳಿದ ವರ್ಗ ಅ), ೧೨ (ಸಾಮಾನ್ಯ), ೧೫(ಹಿಂದುಳಿದ ವರ್ಗ ಅ ಮಹಿಳೆ) ಮತ್ತು ೧೬(ಹಿಂದುಳಿದ ವರ್ಗ ಅ ಮಹಿಳೆ) ರಲ್ಲಿ ಉಪ ಚುನಾವಣೆ ನಡೆಯಲಿದೆ.

ನಗರ ಸ್ಥಳೀಯ ಸಂಸ್ಥೆಗಳ ಪುರಸಭೆ/ಪಟ್ಟಣ ಪಂಚಾಯತಿ ಕೌನ್ಸಿಲರುಗಳ ಸ್ಥಾನಕ್ಕೆ ಅಕ್ಟೋಬರ್ ೧೭ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲಿಸುವ ದಿನಾಂಕ ಅಕ್ಟೋಬರ್ ೧೮ ಹಾಗೂ ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳು ಅಕ್ಟೋಬರ್ ೨೦ ರಂದು ಕೊನೆಯ ದಿನಾಂಕವಾಗಿದೆ.

ಅಕ್ಟೋಬರ್ ೨೮ ರಂದು ಮತದಾನ ಬೆಳಿಗ್ಗೆ ೭ ಗಂಟೆಯಿಂದ ಸಾಯಂಕಾಲ ೫ ಗಂಟೆಯವರಗೆ ನಡೆಯಲಿದೆ. ಒಂದು ವೇಳೆ ಮರು ಮತದಾನ ಇದ್ದಲ್ಲಿ ಅಕ್ಟೋಬರ್ ೩೦ ರಂದು ನಡೆಸಲಾಗುವುದು ಹಾಗೂ ಮತಗಳ ಏಣ ಕೆಯನ್ನು ಅಕ್ಟೋಬರ್ ೩೧ ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.

Home add -Advt

ಕರ್ನಾಟಕ ರಾಜ್ಯೋತ್ಸವ ಈ ಬಾರಿ ಅದ್ದೂರಿ

https://pragati.taskdun.com/belgaum-news/karnataka-rajyotsava-is-grand-this-time/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button