Latest

ನಾಳೆಯೇ ರಾಜೀನಾಮೆ ಎಂದ ಸಿ.ಎಂ.ಇಬ್ರಾಹಿಂ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಧಾನಪರಿಷತ್ ಎಂ ಎಲ್ ಸಿ ಸ್ಥಾನಕ್ಕೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಅವರು ನೀಡಿರುವ ಎಂ ಎಲ್ ಸಿ ಸ್ಥಾನ ನನಗೆ ಬೇಡ ಎಂದು ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ ಸಿ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಇಬ್ರಾಹಿಂ, ನಾನು ವಿಷಕಂಠನಿದ್ದೇನೆ. ಇಲ್ಲಿಯವರೆಗೂ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ನನ್ನ ಮನಸ್ಸು ನೋಯಿಸಿದವರಿಗೆ ಒಳ್ಳೆಯದಾಗಲ್ಲ, ನನ್ನ ಶಾಪ ತುಂಬಾ ಕೆಟ್ಟದ್ದು ಈಗ ತಟ್ಟುತ್ತೆ ಎಂದು ಭಾವುಕರಾದರು.

ನನಗೆ ಪರಿಷತ್ ಸ್ಥಾನ ಸಿಗಲು ಸಿದ್ದರಾಮಯ್ಯ ಕಾರಣ, ಇಬ್ರಾಹಿಂ ನನ್ನ ಆತ್ಮೀಯ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇದೇನಾ ಆತ್ಮೀಯತೆ? ನಾನು ನಾಳೆಯೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಿದ್ದರಾಮಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲಿ. ಯಾರು ಗೆಲ್ಲುತ್ತಾರೆ ನೋಡೋಣ ಎಂದರು.

ನಾನು ಬಡವ, ನನ್ನ ಬಳಿ ಹಣವಿಲ್ಲ, ಡಿ.ಕೆ.ಶಿವಕುಮಾರ್ ದೊಡ್ಡವರು, ಅವರು ನಮ್ಮಂತವರನ್ನು ಯಾಕೆ ಮಾತನಾಡಿಸ್ತಾರೆ? ಆರು ತಿಂಗಳ ಹಿಂದೆ ಎಲ್ಲಾ ಸರಿ ಮಾಡುತ್ತೇನೆ ಎಂದರು ಆದರೆ ಈವರೆಗೆ ಏನೂ ಆಗಿಲ್ಲ. ಕಾಂಗ್ರೆಸ್ ಪಕ್ಷದಿಂದ ನಾನು ಹೊರಗೆ ಬಂದಿದ್ದಾಗಿದೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ: ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ; ನಿಗಮ -ಮಂಡಳಿ ನೇಮಕಾತಿ, ಸಂಪುಟ ವಿಸ್ತರಣೆ ಬಗ್ಗೆ CM ಏನಂದ್ರು?

Home add -Advt

Related Articles

Back to top button