*ಎಫ್ಐಆರ್ ದಾಖಲು: ಹೇಳಿಕೆಗೆ ಬದ್ಧ: ಪ್ರೀತಿಗೆ-ಪ್ರೀತಿ, ಕಲ್ಲಿಗೆ-ಕಲ್ಲು ಎಂದ ಸಿ.ಟಿ.ರವಿ*

ಪ್ರಗತಿವಾಹಿನಿ ಸುದ್ದಿ: ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ
ಮದ್ದೂರಿನಲ್ಲಿ ನಿನ್ನೆ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿ.ಟಿ.ರವಿ, ಅವರು 5% ಇದ್ದಾಗಲೇ ಬಾಲ ಬಿಚ್ಚಿದ್ದಾರೆ. ಇನ್ನು 50% ಆದರೆ ನಮ್ಮ ಮಕ್ಕಳು, ಮರಿಮಕ್ಕಳು ಬದುಕಲು ಸಾಧ್ಯವೇ? ನೀವು ಹೊರಗಿನಿಂದ ಬಂದವರು. ನಾವು ಇಲ್ಲಿಯೇ ಇದ್ದವರು. ತೊಡೆ ತಟ್ಟುವ ಕೆಲಸ ಮಾಡಬೇಡಿ, ತೊಡೆ ತಟ್ಟಿದರೆ ತೊಡೆ ಮುರಿಯುವುದೂ ಗೊತ್ತಿದೆ, ತಲೆ ತೆಗೆಯುವುದೂ ಗೊತ್ತಿದೆ. ಕಲ್ಲು ಹೊಡೆಯುವವರನ್ನು ಕಲ್ಲಿನೊಳಗೇ ಸಮಾಧಿ ಮಾಡೋ ತಾಕಲ್ಲು ಹಿಂದೂಗಳಿಗೆ ಇದೆ. ಯಾರನ್ನೂ ಬಿಡಲ್ಲ ಎಂದು ಭಾಷಣ ಮಾಡಿದ್ದರು.
ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಮಂಜುನಾಥ್ ಎಂಬುವವರು ಮದ್ದೂರು ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಫ್ ಐ ಆರ್ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ಕೇಸ್ ಗಳಿಗೆ ಹೆದರುವವನಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ನಾನು ಹೇಳಿದ್ದೆ. ಪ್ರೀತಿಗೆ ಪ್ರೀತಿ-ಕಲ್ಲಿಗೆ ಕಲ್ಲು. ತೊಡೆ ತಟ್ಟಿ ಕಲ್ಲು ಹೊಡೆದು ಪೆಟ್ರೋಲ್ ಬಾಂಬ್ ಹಾಕಿದರೆ ಸಹಿಸಿಕೊಳ್ಳುವ ಕಾಲ ಹೋಯಿತು ಎಂದು ಹೇಳಿದ್ದೆ, ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನನ್ನದು ಬೆರಕೆ ರಕ್ತವಲ್ಲ ಪ್ಯೂರ್ ಹಿಂದುತ್ವದ ರಕ್ತ ಎಂದು ಕಿಡಿಕಾರಿದ್ದಾರೆ.