ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಮ್ಮಲ್ಲಿಯೂ ರಾಜಿ ರಾಜಕರಣ ಮಾಡಿ ಕೆಲವರು ತಪ್ಪು ಮಾಡಿದ್ದಾರೆ. ರಾಜಿ ರಾಜಕಾರನದಿಂದಾಗಿಯೇ ಬಿಜೆಪಿ ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗರಂ ಆಗಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕೆಲವರ ರಾಜಿ ರಾಜಕಾರಣದಿಂದಾಗಿಯೇ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಹೊಂದಾಣಿಕೆ ರಾಜಕಾರಣದಿಂದಾಗಿ ಬಿಜೆಪಿ ಸೋತಿದೆ. ಇಂತಹ ನಡೆ ಅನುಸರಿಸದಿದ್ದರೆ ಪಕ್ಷ ಇಂದು ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಕಿಡಿ ಕಾರಿದ ಸಿ.ಟಿ.ರವಿ, ಕಾರ್ಲ್ಸ್ ಮಾರ್ಕ್ಸ್ ನ ಪಠ್ಯ ಓದಬಹುದು. ಆರ್.ಎಸ್.ಎಸ್ ನಾಯಕರದ್ದು ಯಾಕೆ ಓದಬಾರದು. ಪಠ್ಯದಿಂದ ಹೊರಹಾಕಬಹುದು. ಆದರೆ ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದರು.
https://pragati.taskdun.com/chamarajanagaroxygen-disasterre-investigation/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ