Breaking News…. ಸಿ ವೋಟರ್ಸ್ ಸಮೀಕ್ಷೆ ಪ್ರಕಟ: ಕಾಂಗ್ರೆಸ್ ಗೆ ಬಹುಮತ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಿ ವೋಟರ್ಸ್ ಸಮೀಕ್ಷೆ ಹೇಳಿದೆ.


ಸಿ- ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 115ರಿಂದ 127, ಬಿಜೆಪಿ 68ರಿಂದ 80 ಹಾಗೂ ಜನತಾ ದಳ 23ರಿಂದ 35 ಸ್ಥಾನಗಳನ್ನು ಪಡೆಯಲಿದೆ.

ಮುಂಬೈ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 29 ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲಲಿದೆ. ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ 12, ಕಾಂಗ್ರೆಸ್ 23 ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಸಹ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದೆ. ಕರಾವಳಿಯ 3 ಜಿಲ್ಲೆಗಳಲ್ಲಿ
ಬಿಜೆಪಿ 9ರಿಂದ 13 ಹಾಗೂ ಕಾಂಗ್ರೆಸ್ 8ರಿಂದ 12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ 28, ಬಿಜೆಪಿ 5 ಹಾಗೂ ಜನತಾ ದಳ 27 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ 19, ಬಿಜೆಪಿ 15 ಹಾಗೂ ಜೆಡಿಎಸ್ 3 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ಸಿ- ವೋಟರ್ ಸಮೀಕ್ಷೆ ತಿಳಿಸಿದೆ.

https://pragati.taskdun.com/what-programs-require-permission-3-paramilitary-force-for-belgaum-27-people-escape-the-border/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button