
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ಸೋಮವಾರ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಮೂಲಗಳ ಪ್ರಕಾರ ಒಟ್ಟು 13 ಮಂದಿ ಸಂಪುಟ ಸೇರ್ಪಡೆಯಾಗಲಿದ್ದಾರೆ.
10:3 ಸೂತ್ರದಂತೆ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದ್ದು, 10 ಪಕ್ಷಾಂತರಿಗಳ ಜತೆಗೆ ಮೂವರು ಮೂಲ ಬಿಜೆಪಿಯವರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ.
ಬಿಜೆಪಿ ಪಾಳಯದಿಂದ ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ್ ಲಿಂಬಾವಳಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತವಾಗಿದೆ. ಉಮೇಶ್ ಕತ್ತಿ ಅಥವಾ ಹಾಲಪ್ಪ ಆಚಾರ್ ಅವರಲ್ಲೊಬ್ಬರಿಗೆ ಸಚಿವಗಿರಿ ಸಿಗಬಹುದು ಎಂದು ಮೂಲಗಳು ಹೇಳುತ್ತಿವೆ.
ಸಂಭಾವ್ಯ ಸಚಿವರು:
* ರಮೇಶ್ ಜಾರಕಿಹೊಳಿ
* ಭೈರತಿ ಬಸವರಾಜು
* ಎಸ್.ಟಿ. ಸೋಮಶೇಖರ್
* ಡಾ. ಸುಧಾಕರ್
* ಆನಂದ್ ಸಿಂಗ್
* ಬಿ.ಸಿ. ಪಾಟೀಲ್
* ನಾರಾಯಣ ಗೌಡ
* ಶಿವರಾಮ್ ಹೆಬ್ಬಾರ್
* ಗೋಪಾಲಯ್ಯ
* ಶ್ರೀಮಂತ ಪಾಟೀಲ್ ಅಥವಾ ಮಹೇಶ್ ಕುಮಟಳ್ಳಿ
ಮೂಲ ಬಿಜೆಪಿಗರಾದ
* ಸಿ.ಪಿ. ಯೋಗೇಶ್ವರ್
* ಅರವಿಂದ್ ಲಿಂಬಾವಳಿ
* ಉಮೇಶ್ ಕತ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ