ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ನೂತನ ಸಚಿವರಿಗೆ ಖಾತೆ ಹಂಚಿಕೆ, ಅದಲು-ಬದಲು ಮಾಡಿದ ಬೆನ್ನಲ್ಲೇ ಸಚಿವರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೆಲ ಸಚಿವರ ಖಾತೆ ಮರುಹಂಚಿಕೆ ಮಾಡಿದ್ದಾರೆ. ಆದರೂ ಸಮಾಧಾನವಾಗದ ಸಚಿವರು ಮತ್ತೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಆರು ಸಚಿವರ ಖಾತೆ ಮತ್ತೆ ಬದಲಿಸಲಾಗಿದ್ದು, ಕೆಲವರಿಗೆ ಹೆಚ್ಚುವರಿ ಖಾತೆ ವಹಿಸಲಾಗಿದೆ. ಆದಾಗ್ಯೂ ಸಚಿವರು ಸಮಾಧಾನಗೊಂಡಿಲ್ಲ.
ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್ ಗೆ ಅಬಕಾರಿ ಖಾತೆ ನೀಡಲಾಗಿತ್ತು. ಆದರೆ ಇದಕ್ಕೆ ಎಂಟಿಬಿ ಒಪ್ಪಿರಲಿಲ್ಲ. ಹೀಗಾಗಿ ಎಂಟಿಬಿಗೆ ನೀಡಲಾಗಿದ್ದ ಅಬಕಾರಿ ಖಾತೆ ವಾಪಸ್ ಪಡೆದು ಪೌರಾಡಳಿತ ನೀಡಲಾಗಿದೆ.
ಆರ್.ಶಂಕರ್ – ತೋಟಗಾರಿಕೆ, ರೇಷ್ಮೆ
ಕೆ.ಗೋಪಾಲಯ್ಯ- ಅಬಕಾರಿ
ಎಂಟಿಬಿ ನಾಗರಾಜ್-ಪೌರಾಡಳಿತ, ಸಕ್ಕರೆ
ಜೆ.ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ, ವಕ್ಫ್
ಅರವಿಂದ ಲಿಂಬಾವಳಿ- ಅರಣ್ಯ, ಕನ್ನಡ ಮತ್ತು ಸಂಸ್ಕೃತಿ
ಎರಡನೇ ಬಾರಿ ಖಾತೆ ಬದಲಾವಣೆ ಮಾಡಿ ತೋಟಗಾರಿಕೆ, ರೇಷ್ಮೆ ಖಾತೆ ಕೊಟ್ಟರೂ ಸಮಾಧಾನವಾಗದ ಸಚಿವ ಆರ್.ಶಂಕರ್ ಮತ್ತೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿಯೇ ಸಿಎಂ ನಿವಾಸಕ್ಕೆ ಬಂದ ಆರ್.ಶಂಕರ್, ಮತ್ತೆ ತಮ್ಮ ಮುನಿಸು ಹೊರಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ