*ಮತಗಳುವು ಪ್ರಕರಣ: ಸಾಕ್ಷ್ಯ ಸಮೇತ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ*

ಪ್ರಗತಿವಾಹಿನಿ ಸುದ್ದಿ: ಮತಗಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾಕ್ಷ್ಯ ಸಮೇತ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕದ ಲೋಕಸಭಾ ಚುನಾವಣೆ ವೇಳೆ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಈ ಬಗ್ಗೆ ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದರಂತೆ ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ನಕಲಿ ಮತದಾನ, ಮತಗಳ್ಳತನ ಯಾವರೀತಿ ನಡೆದಿದೆ ಎಂಬ ಬಗ್ಗೆ ವಿವರಿಸುವುದರ ಜೊತೆಗೆ ಪಟ್ಟಿ ಬಿಡುಗಡೆ ಮಾಡಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಅಕ್ರಮ ಮತದಾನ ನಡೆದಿದೆ. 11,565 ನಕಲಿ ಮತದಾನ ನಡೆದಿದೆ. ಹಲವು ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರೇ ಇಲ್ಲ. ಅಡ್ರೆಸ್ 0 ಎಂದು ನಮೂಸಲಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರೇ ಒಂದು. ಮತದಾನ ಮಾಡಿರುವುದೇ ಒಬ್ಬರು. ಒಬ್ಬನೇ ಮತದಾರ ಆದಿತ್ಯ ಶ್ರೀವಾಸ್ತವ್ ಎಂಬಾತ ಮಹದೇವಪುರದ ಹಲವು ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾನೆ. ಅಲ್ಲದೇ ಆದಿತ್ಯ ಶ್ರೀವಾಸ್ತವ್ ಹೆಸರು ಮಹದೇವಪುರ ಮಾತ್ರವಲ್ಲ ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೆ. ಒಂದೇ ವ್ಯಕ್ತಿ ಹಲವು ರಾಜ್ಯಗಳಲ್ಲಿ ಮತದಾನ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇಂತಹ ಹಲವು ಪ್ರಕರಣಗಳನ್ನು ವಿವರಿಸಿದರು.
ಮಹದೇವಪುರದಲ್ಲಿ ನಕಲಿ ಮತದಾರರು 11,565. ನಕಲಿ ಅಡ್ರೆಸ್ ಕೊಟ್ಟವರು 40,009 ಜನ. ಒಂದೇ ಅಡ್ರೆಸ್ ನಲ್ಲಿ ಹಲವು ಮತದಾರರ ಗುಂಪು 10,452. ವೋಟರ್ ಐಡಿಯಲ್ಲಿ ಸೇರಿಸದ ಫೋಟೋ ಇರುವವರು 4,312. ಎಂದು ದಾಖಲೆ ಸಮೇತ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.