Latest

ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ನಿಂದ ಪುಸ್ತಕ ಪ್ರಶಸ್ತಿಗೆ ಕೃತಿಗಳ ಅಹ್ವಾನ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಕಳೆದ ಹಲವು ವರ್ಷಗಳಿಂದ ಕನ್ನಡದ ಶ್ರೇಷ್ಠ ಕೃತಿಗಳಿಗೆ ಪ್ರಶಸ್ತಿಗಳನ್ನು ನೀಡಲು ಗಂಗಮ್ಮ ಸೋಮಪ್ಪ ಬೊಮ್ಮಾಯಿ‌ ಟ್ರಸ್ಟ್ ನಿಂದ ಕೃತಿಗಳನ್ನು  ಆಹ್ವಾನಿಸಲಾಗಿದೆ.

ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಾನಪದಕ್ಕೆ ಸಂಬಂಧಿಸಿದಂತೆ ಕೃತಿಗೆ ‘ಜಾನಪದ ಸಿರಿ’ ಪ್ರಶಸ್ತಿ, ಮಹಿಳೆಯರು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ‘ಅಕ್ಕ’ ಪ್ರಶಸ್ತಿ ಹಾಗೂ 18 ವರ್ಷದೊಳಗಿನ ಮಕ್ಕಳು ರಚಿಸಿದ ಕೃತಿಗೆ ‘ಅರಳು ಮೊಗ್ಗು’ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರತಿಯೊಂದು ಪ್ರಶಸ್ತಿಗೂ 25 ಸಾವಿರ ರೂ.‌ನಗದು, ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

2020ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡ ಕೃತಿಗಳನ್ನು ರಚಿಸಿದ ಲೇಖಕರು ತಮ್ಮ ಕೃತಿಯ 3 ಪ್ರತಿಗಳನ್ನು ಇದೇ ಮಾರ್ಚ್ 10ರೊಳಗೆ ಚಂದ್ರಶೇಖರ್ ವಸ್ತ್ರದ, ಬೆಳಗು, ಆನಂದ ಆಶ್ರಮ ರಸ್ತೆ, ಪಂಚಾಕ್ಷರಿ ನಗರ, ಗದಗ ಈ ವಿಳಾಸಕ್ಕೆ  ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9448677434 ಸಂಪರ್ಕಿಸಬಹುದು.

*ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದ ಸಚಿವ ಅಶ್ವತ್ಥನಾರಾಯಣ; ನೀವೇ ಕೋವಿ ಹಿಡಿದು ಬನ್ನಿ; ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ*

https://pragati.taskdun.com/ashwaththanarayanasiddaramaiahtippuvidhanasabha-election/

ಪುರುಷರಿಗಾಗಿಯೂ ಬರುತ್ತಿದೆ ಸಂತಾನ ಹರಣ ಮಾತ್ರೆ !

https://pragati.taskdun.com/fertility-control-pills-are-coming-for-men-too/

*ಕಲುಷಿತ ನೀರು ಸೇವಿಸಿ ಮೂವರು ಮಹಿಳೆಯರು ಸಾವು*

https://pragati.taskdun.com/contaminated-wateryadagiri3-deaths/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button