Belagavi NewsBelgaum NewsCrimeKarnataka News
*ಕ್ಯಾಂಪ್ ಠಾಣೆ ಪೊಲೀಸ್ರಿಂದ ಮಟಕಾ ದಾಳಿ; ಓರ್ವ ಆರೋಪಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕ್ರಕಶಾಂಕ ರೋಡ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದಾಗ ಕ್ಯಾಂಪ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಸನ್ನ ಹನಮಂತ ಉಪ್ಪಾರ (45) ಬಂಧಿತ ಆರೋಪಿ ಕ್ಯಾಂಪ್ ಠಾಣೆಯ ಪಿಎಸ್ಐ ರುಕ್ಕ್ಮಿಣಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿಯಿಂದ 1,470 ರೂ. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.11/2026 ಕಲಂ.78(III) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ. ತನಿಖೆ ಮುಂದುವರೆಸಲಾಗಿದೆ.




