ಪ್ರಗತಿವಾಹಿನಿ ಸುದ್ದಿ, ಖಾನಾಪುರ: ರಾಜ್ಯ ಸರ್ಕಾರಿ ನೌಕರರಿಗೆ ಈಗಿರುವ ನೂತನ ಪಿಂಚಣಿ ಯೋಜನೆಯನ್ನು ಹಿಂಪಡೆದು ೨೦೦೬ಕ್ಕೂ ಮೊದಲು ಇದ್ದಂತೆ ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರೂ ಸೇರಿದಂತೆ ವಿವಿಧ ಇಲಾಖೆಗಳ ಎನ್.ಪಿ.ಎಸ್ ನೌಕರರು ಆಗ್ರಹಿಸಿದರು.
ತಾಲೂಕಿನ ಕಕ್ಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಭೆ ನಡೆಸಿದ ಎನ್.ಪಿ.ಎಸ್ ನೌಕರರು ಬಳಿಕ ರಾಖಿ ಅಭಿಯಾನದ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಂಕೇತಿಕ ಧರಣಿ ನಡೆಸಿದರು.
ಸಂಘದ ವತಿಯಿಂದ ರಾಜ್ಯದ ಸಿಎಂ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ರಾಖಿಯನ್ನು ಕಳಿಸಿ ಎನ್.ಪಿ.ಎಸ್ ನೌಕರರಿಗೆ ಜೀವನದ ಸಂಧ್ಯಾಕಾಲದಲ್ಲಿ ಆರ್ಥಿಕ ಭದ್ರತೆ ಮತ್ತು ವಿಶ್ರಾಂತ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಎಸ್.ವಾಯ್ ಪಾಟೀಲ ಮಾತನಾಡಿ, ಹೊಸ ಪಿಂಚಣಿ ಯೋಜನೆಯಿಂದ ರಾಜ್ಯಾದ್ಯಂತ ಹೊಸದಾಗಿ ನೌಕರಿ ಪಡೆದ ೧.೫ ಲಕ್ಷದಷ್ಟು ಸರ್ಕಾರಿ ನೌಕರರು ಸೇವಾ ಭದ್ರತೆ, ನಿಶ್ಚಿತ ಪಿಂಚಣಿ, ಕುಟುಂಬ ಪಿಂಚಣಿ, ಸರ್ಕಾರಿ ಪ್ರಾವಿಡೆಂಟ್ ಫಂಡ್ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೂಡಲೇ ಈ ಯೋಜನೆಯಿಂದ ಸರ್ಕಾರಿ ನೌಕರರಿಗಾಗುತ್ತಿರುವ ತೊಂದರೆಗಳನ್ನು ಪರಿಗಣಿಸಿ ಎನ್.ಪಿ.ಎಸ್ ಹಿಂಪಡೆದು ಹಳೆಯ ಯೋಜನೆಯನ್ನು ಮುಂದುವರೆಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳ ಎನ್.ಪಿ.ಎಸ್ ನೌಕರರು, ಶಿಕ್ಷಕರು ಮತ್ತಿತರರು ಇದ್ದರು.
ಚನ್ನಮ್ಮ ನಾಡಿನ NPS ವನಿತೆಯರ ವಿಶಿಷ್ಠ ಅಭಿಯಾನ
ಮಿಲ್ಟ್ರಿ ಆಫೀಸರ್ ಎಂದು ಹೇಳಿ 5 ಮದುವೆಯಾದ; ಈಗ ಕಂಬಿ ಹಿಂದೆ ಹೋದ
ನ.18ರಂದು ಬೆಳಗಾವಿಯಲ್ಲಿ ನಂದಿನಿ ಬ್ರಾಂಡ್‌ನ 9 ಹೊಸ ಉತ್ಪನ್ನಗಳ ಬಿಡುಗಡೆ -ಬಾಲಚಂದ್ರ ಜಾರಕಿಹೊಳಿ
ಕೊರೊನಾ ಭಯದಿಂದ ಬಿಸಿನೀರು ಕುಡಿಯುತ್ತಿದ್ದೀರಾ? -ಓದಿ ಈ ಸುದ್ದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ