Kannada NewsKarnataka NewsLatest

ದೀಪಾವಳಿಗಾಗಿ ಪೇಂಟ್ ಬಳಿಯುತ್ತಿದ್ದವ ವಿದ್ಯುತ್ ಆಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ದೀಪಾವಳಿ ಹಬ್ಬದ ಪೂರ್ವತಯಾರಿಗಾಗಿ ಮನೆಯೊಂದಕ್ಕೆ ಬಣ್ಣ ಬಳಿಯುತ್ತಿದ್ದ ವ್ಯಕ್ತಿಗೆ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಗಂದಿಗವಾಡ ಗ್ರಾಮದ ರಾಜು ಕಮ್ಮಾರ (೩೦) ಎಂದು ಗುರುತಿಸಲಾಗಿದ್ದು, ಇವರು ಕಟ್ಟಡಗಳಿಗೆ ಪೆಂಟಿಂಗ್ ಕೆಲಸ ಮಾಡುತ್ತಿದ್ದರು.

Home add -Advt

ಹಿರೇಮುನವಳ್ಳಿ ಗ್ರಾಮದ ಮನೆಯೊಂದರ ಮೇಲ್ಭಾಗದ ಗೋಡೆಗೆ ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಮನೆ ಮೇಲೆ ಹಾದುಹೋಗಿದ್ದ ಸರ್ವೀಸ್ ವೈರ್ ರಾಜು ಅವರ ಕುತ್ತಿಗೆಗೆ ತಗುಲಿದ್ದರಿಂದ ಅವರು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button