Belagavi NewsBelgaum NewsKarnataka NewsPolitics

*ಬೆಳಗಾವಿ- ಬೆಂಗಳೂರು ವಿಮಾನ ರದ್ದು: ಮುಂದುವರಿಸಲು ಅಸಾಧ್ಯ ಎಂದ ಸಂಸ್ಥೆ*

ಪ್ರಸ್ತಾಪಿತ ವಿಮಾನಯಾನ ಸೇವೆಯ ಲೀಸ್ ಅವಧಿ ಪೂರ್ಣಗೊಂಡಿರುವ ಪ್ರಯುಕ್ತ ಈ ಸೇವೆಯನ್ನು ರದ್ದುಪಡಿಸುವುದು ಅನಿವಾರ್ಯ ಎಂದ ಸಂಸ್ಥೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ. ಆರ್ ನಾಯ್ಡುರನ್ನು ಭೇಟಿಯಾಗಿ ಬೆಳಗಾವಿ ಬೆಂಗಳೂರು ಬೆಳಗಾವಿ ಮದ್ಯ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆಯ ವಿಮಾನ ಸೇವೆಯನ್ನು ರದ್ದು ಮಾಡಿರುವ ಕುರಿತು ಮತ್ತು ಇದನ್ನು ರದ್ದಾಗದಂತೆ ನೋಡಿಕೊಳ್ಳುವ ವಿಷಯವಾಗಿ ಚರ್ಚಿಸಿದರು.

ಬೆಳಗಾವಿ – ಬೆಂಗಳೂರು – ಬೆಳಗಾವಿ ನಡುವೆ ಇಂಡಿಗೋ ಸಂಸ್ಥೆ ಪ್ರತಿನಿತ್ಯ ಬೆಳಿಗ್ಗೆ ವಿಮಾನ ಸೇವೆಯನ್ನು ತುಂಬಾ ದಿನಗಳಿಂದ ಒದಗಿಸುತ್ತಾ ಬಂದಿದೆ, ಕಳೆದ ಒಂದು ವರ್ಷದಲ್ಲಿ  82% ರಷ್ಟು ಅಂದರೆ ಪೂರ್ಣ ಸಾಮರ್ಥ್ಯ ಪ್ರಯಾಣಿಕರನ್ನು ವಿಮಾನದಲ್ಲಿ ಈ ಮಾರ್ಗದಲ್ಲಿ ಕರೆದೊಯುತ್ತಿದ್ದರು. ಆದರೆ ಇಂಡಿಗೋ ಏರ್ ಲೈನ್ಸ್ ಬರುವ ದಿನಾಂಕ 27-10-2024 ರಿಂದ ಈ ಸೇವೆಯನ್ನು ರದ್ದುಗೊಳಿಸಲಿದೆ.

ಇದು ಅತ್ಯಂತ ಖೇದಕರ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುವುದು, ಇದನ್ನು ಯಾವುದೇ ಕಾರಣಕ್ಕೆ ರದ್ದು ಮಾಡದಂತೆ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವಂತೆ ಸಂಸದರಾದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವರಲ್ಲಿ ವಿನಂತಿಸಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವರು ಈ ಬಗ್ಗೆ ಸಂಬಂಧಿಸಿದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವ ಭರವಸೆಯನ್ನು ನೀಡಿದ್ದಾಗಿ ಸಂಸದರು ತಿಳಿಸಿರುವರು. ಇದೇ ರೀತಿಯಾಗಿ ಬೆಳಗಾವಿ ವಿಮಾನ ನಿಲ್ದಾಣದಿಂದ ಇತರ ನಗರಗಳಿಗೂ ಸಹ ಅಂದರೆ ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಸೂರತ್, ಮುಂಬಯಿ (ಏರಬಸ್) ಬೆಂಗಳೂರು (ಏರಬಸ್) ಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಇತರೆ ವಿಮಾನ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ವಿಷಯ ಪ್ರಸ್ತಾಪಿಸಿದಾಗ ಆ ವಿಷಯವನ್ನು ಸಹ ಅವಶ್ಯವಾಗಿ ಪರಿಗಣಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾಗಿ ಹೇಳಿದರು.

ಅದರಂತೆ ಇನ್ನೂ ಉಡಾನ -3/0 ಯೋಜನೆಯನ್ನು ಸಹ 10 ವರ್ಷಗಳ ಕಾಲಾವಧಿಗೆ ವಿಸ್ತರಿಸಿ, ಇದಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರ್ಪಡಿಸಿ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿ ಮನವಿಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಸಂಸದರು ಅರ್ಪಿಸಿದರು.

ಈ ಪೂರ್ವದಲ್ಲಿ ಸಂಸದ ಜಗದೀಶ್ ಶೆಟ್ಟರ್ ಇವರು ಪ್ರಸ್ತಾಪಿತ ವಿಷಯವಾಗಿಯೇ ನವದೆಹಲಿಯ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಪ್ರಸ್ತಾಪಿತ ವಿಮಾನಯಾನ ಸೇವೆಯ ಲೀಸ್ ಅವಧಿ ಪೂರ್ಣಗೊಂಡಿರುವ ಪ್ರಯುಕ್ತ ಈ ಸೇವೆಯನ್ನು ರದ್ದುಪಡಿಸುವುದು ಅನಿವಾರ್ಯ. ಆದರೆ ಬರುವ ಡಿಸೆಂಬರ್ ಮಾಹೆಯಲ್ಲಿ ಹೊಸ ವಿಮಾನಗಳು ಸಂಸ್ಥೆಗೆ ಪೂರೈಕೆ ಯಾಗಲಿರುವ ಹಿನ್ನೆಲೆಯಲ್ಲಿ ಆವಾಗ್ಲೆ ಖಂಡಿತವಾಗಿ ಪ್ರಸ್ತಾಪಿತ ಮಾರ್ಗದಲ್ಲಿ ಈ ಸೇವೆಯನ್ನು ಪುನಃ ಆರಂಭಿಸುವ ಭರವಸೆಯನ್ನು ಅವರು ನೀಡಿರುವುದಾಗಿ ಹಾಗೂ ಇದೇ ಸಂದರ್ಭದಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ, ಇನ್ನಿತರ ನಗರಗಳಿಗೂ ಸೇವೆಯನ್ನು ಒಗಿಸುವ ಬಗ್ಗೆ ಅವರೊಡನೆ ಚರ್ಚಿಸಿರುವ ಅಂಶವನ್ನು ಪ್ರಸ್ತಾಪಿಸಿದ್ದಾಗಿ ಸಂಸದ ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ. ಆರ್ ನಾಯ್ಡುರನ್ನು ಭೇಟಿಯಾಗಿ ಬೆಳಗಾವಿ ಬೆಂಗಳೂರು ಬೆಳಗಾವಿ ಮದ್ಯ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆಯ ವಿಮಾನ ಸೇವೆಯನ್ನು ರದ್ದು ಮಾಡಿರುವ ಕುರಿತು ಮತ್ತು ಇದನ್ನು ರದ್ದಾಗದಂತೆ ನೋಡಿಕೊಳ್ಳುವ ವಿಷಯವಾಗಿ ಚರ್ಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button