*ಕ್ಯಾನ್ಸರ್ ಪತ್ತೆ ಕಾರ್ಯದಲ್ಲಿ ಅಮೆರಿಕ ವಿವಿಯಲ್ಲಿ ವಿಶೇಷ ತರಬೇತಿ ಪಡೆದ KLE ಡಾ. ಪ್ರಭಾಕರ ಕೋರೆ ರಿಸರ್ಚ್ ಕೇಂದ್ರದ ವಿಜ್ಞಾನಿ ಡಾ.ಶ್ರೀಧರ ಘಗಾನೆ*

ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್ ರೋಗಪತ್ತೆ ಕಾರ್ಯದಲ್ಲಿ ಮಹತ್ವದ ಹಂತದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚ್ ನ ಡಾ. ಪ್ರಭಾಕರ ಕೋರೆ ಬೇಸಿಕ್ ಸೈನ್ಸ್ ರಿಸರ್ಚ್ ಕೇಂದ್ರದ ವಿಜ್ಞಾನಿ ಡಾ. ಶ್ರೀಧರ ಘಗಾನೆ ಅವರು ಅಮೇರಿಕಾದ ಫಿಲಡೆಲ್ಫಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ಎರಡು ತಿಂಗಳುಗಳ ಕಾಲ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಡಾ. ಮ್ಯಾಥ್ಯೂ ಎಲ್ ಠಾಕೂರ ಹಾಗೂ ಡಾ. ಕೆವಿನ್ ಕೆಲ್ಲಿ ಅವರ ಪ್ರಯೋಗಾಲಯದಲ್ಲಿ ತರಬೇತಿ ಪಡೆದ ಅವರು ಕಾನ್ಫೊಕಾಲ್ ಫ್ಲೊರೊಸೆನ್ಸ ಪ್ರಾಯೋಗಿತ ತರಬೇತಿಯಲ್ಲಿ ಟಿಪಿ4303 ಸೂಕ್ಷ್ಮಾಣು ಬಳಸಿಕೊಂಡು ಪ್ರಸ್ಟೇಟ್ ಕ್ಯಾನ್ಸರ ರೋಗಪತ್ತೆ ಸರಳ ವಿಧಾನವನ್ನು ತೋರ್ಪಡಿಸಿದ್ದಾರೆ. ಈ ವಿಧಾನವು ಭವಿಷ್ಯದಲ್ಲಿ ರೋಗಪತ್ತೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ಪರಿಚಲನೆಗೊಳ್ಳುವ ಗಡ್ಡೆಕೋಶ ಡಿಎನ್ಎ ಕಂಡುಹಿಡಿಯಲು ಏಕಕೋಶ ವಿಶ್ಲೇಷನೆಯನ್ನು ನೀಡಿದ್ದಾರೆ. ಈ ಅತ್ಯಾಧುನಿಕ ವಿಧಾನವು ಪ್ರಾಸ್ಟೇಟ್, ಅಂಡಾಶಯ ಹಾಗೂ ಎಂಡೋಮೆಟ್ರಿಯಲ್ ಕ್ಯಾನ್ಸರ ಕಂಡುಹಿಡಿಯುವಲ್ಲಿ ಸಹಕಾರಿಯಾಗಲಿದ್ದು, ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಅತ್ಯಂತ ಪರಿಣಾಮಕಾರಿ, ರೋಗಿಸ್ನೇಹಿ ಹಾಗೂ ಕೈಗೆಟಕುವ ದರದಲ್ಲಿ ರೋಗ ಕಂಡು ಹಿಡಿಯಬಹುದು.
ಈ ಸಂಶೋಧನೆಯು ಆರಂಭಿಕ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ಸಹಕಾರಿಯಾಗಿದ್ದು, ಚಿಕಿತ್ಸಾ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಅಪಾರ ಭರವಸೆಯನ್ನು ಹೊಂದಿದೆ.
ಕೈಗೆಟಕುವ ದರದಲ್ಲಿ ಆರಂಭಿಕ ಹಂತದಲ್ಲಿ ಕ್ಯಾನ್ಸರ ಕಂಡುಹಿಡಿಯುವದರಿಂದ ಭಾರತೀಯರೆಗೆ ಪ್ರಯೋಜನವಾಗಲಿದೆ. ಇದರಿಂದ ಪರಿಣಾಮಕಾರಿ ಆರೋಗ್ಯ ರಕ್ಷಣೆಯ ನವೀಣ ತಂತ್ರಜ್ಞಾನ ನೀಡುವ ಕಾಹೆರನ ಧ್ಯೇಯವಾಗಿದೆ. ಈ ಪರಿವರ್ತನಾ ಕಾರ್ಯವು ಅತ್ಯಾಧುನಿಕ ಸಂಶೋಧನೆಯ ಆರಂಭ ಹಾಗೂ ಕ್ಯಾನ್ಸರ ಸಂಶೋಧನೆಯು ಜಾಗತಿಕ ಶೈಕ್ಷಣಿಕ ಸಹಯೋಗಗಳಿಗೆ ಬಲವನ್ನು ನೀಡಲಿದೆ. ಅಲ್ಲದೇ ಸ್ಥಳೀಯ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ವಿಜ್ಞಾನಿ ಡಾ. ಶ್ರೀಧರ ಘಗಾನೆ ಅವರು ತಿಳಿಸಿದ್ದಾರೆ.
ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಖ್ಯಾತ ವಿಜ್ಞಾನಿ ಡಾ. ರಿಚರ್ಡ್ ಡರ್ಮನ್ (ಪ್ರೊವೊಸ್ಟ್, ಗ್ಲೋಬಲ್ ಅಫೇರ್ಸ್), ಡಾ. ಲಿಯೊನಾರ್ಡ್ ಗೊಮೆಲ್ಲಾ, ಡಾ. ಮ್ಯಾಥ್ಯೂ ಎಲ್. ಠಾಕೂರ್ (ಡೈರೆಕ್ಟರ್ ಆಫ್ ಬಯೋಫ್ಲೂಯಿಡ್ ಲ್ಯಾಬ್ಸ್) ಮತ್ತು ಪಾರ್ಥ್ ಲಲಾಕಿಯಾ ಸಂಶೋಧನೆಗೆ ಸಹಕಾರ ನೀಡಿದರು.
ವಿಶೇಷ ತರಬೇತಿ ಪಡೆದು ಸಂಶೋಧನೆಗೈದ ಡಾ. ಶ್ರೀಧರ ಘಗಾನೆ ಅವರನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಕಾಹೆರನ ಉಪಕುಲಪತಿ ಡಾ. ನಿತಿನ್ ಗಂಗಾನೆ, ಕುಲಸಚಿವರಾದ ಡಾ. ಎಂ. ಎಸ್. ಗಣಾಚಾರಿ ಅಭಿನಂದಿಸಿದ್ದು, ಜೆಎನ್ಎಂಸಿ ಸಂಶೋಧನಾ ಕೆಂದ್ರದ ನಿರ್ದೇಶಕರಾದ ಡಾ. ಎಸ್. ಎಸ್. ಗೌಡರ್, ಡಾ. ಆರ್. ಬಿ. ನೆರ್ಲಿ ಹಾಗೂ ಡಾ. ರಮೇಶ್ ಎಸ್. ಪರಾಂಜಪೆ ಅವರು ಸಂಶೋಧನೆಗೆ ಸಹಾಯ ಸಹಕಾರ ನೀಡಿದರು.
In a significant step toward advancing cancer diagnostics, Dr. Shridhar C. Ghagane, Scientist Grade II at Dr Prabhakar Kore Basic Science Research Centre, KLE Academy of Higher Education and Research (KAHER), recently completed a two-month research visit to Thomas Jefferson University, Philadelphia, USA. The visit was facilitated under the visionary leadership of Dr. Prabhakar Kore, Hon’ble Chairman of KLE Society and Hon’ble Chancellor of KAHER, along with the academic and research leadership of Dr. Nitin Gangane (Hon’ble Vice-Chancellor, KAHER), Dr. M. S. Ganachari (Hon’ble Registrar, KAHER), Dr. S. S. Goudar (Director, JNMC Research Unit), Dr. R. B. Nerli (Director, Urinary Biomarker Research Center), and Dr. Ramesh S. Paranjape (Director BSRC).
During the visit, Dr. Ghagane worked closely with Dr. Mathew L. Thakur’s laboratory and Dr. Kevin Kelly’s laboratory at Thomas Jefferson University, where he gained hands-on experience in advanced Confocal Fluorescence Microscopy. The research focused on the diagnosis of prostate cancer by targeting VPAC receptors using the TP4303 molecule, an innovative molecular probe with promising clinical potential.
Beyond training, Dr. Ghagane initiated a novel area of research tailored for the Indian population: the application of single-cell analysis to detect circulating tumor cells (CTCs) and circulating tumor DNA (ctDNA). This cutting-edge approach aims to enable the non-invasive or minimally invasive detection of prostate, ovarian, and endometrial cancers, offering a more patient-friendly and affordable diagnostic pathway compared to conventional methods.
The collaborative research holds immense promise for early cancer detection, prognosis, and the development of personalized treatment strategies. Importantly, its affordability and accessibility could benefit a wider population in India, aligning with KAHER’s mission to deliver impactful healthcare innovations.
The visit was hosted by eminent scientists and leaders at Thomas Jefferson University, including Dr. Richard Derman (Provost, Global Affairs), Dr. Leonard Gomella (Chair Urology), Dr. Mathew L. Thakur (Director Biofluid Labs), and Mr. Parth Lalakia, who played pivotal roles in supporting the collaboration.
Speaking about the initiative, Dr. Ghagane expressed gratitude to both institutions, stating that this collaborative effort would “bridge global expertise with local healthcare needs to advance cancer research and improve patient outcomes in India.”
This pioneering work marks the beginning of a new research initiative at KAHER, strengthening its position as a leader in translational cancer research and global academic collaborations.