ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಆರ್ ಬಿ ಮತ್ತು ಸಿಇಎನ್ ಘಟಕದ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 6 ಲಕ್ಷ ರೂ, ಮೌಲ್ಯದ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.
ದಿನಾಂಕ 10/06/2023 ರಂದು ಬೆಳಗಾವಿ ಡಿಸಿಆರ್‌ಬಿ ಘಟಕದ ಡಿಎಸ್‌ಪಿ ವೀರೇಶ ದೊಡಮನಿ ಇವರ ಹಾಗೂ ಮೇಲಧಿಕಾರಿಗಳ ಮಾರ್ಗದರ್ಶದೊಂದಿಗೆ ಬಿ ಆರ್ ಗಡ್ಡಕರ್ ಪೊಲೀಸ್ ಇನ್ಸಪೆಕ್ಟರ್ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆ ಬೆಳಗಾವಿ ಇವರು ಹಾಗೂ ಬೆಳಗಾವಿ ಡಿಸಿಆರ್‌ಬಿ ಘಟಕದ ಸಿಬ್ಬಂದಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಸಮೀಪ ಹಂಚಿನಾಳ ಗ್ರಾಮದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರನ್ನು ಬಂಧಿಸುವುದರೊಂದಿಗೆ ಅವರಿಂದ 4 ಕೆಜಿ 180 ಗ್ರಾಂ ಗಾಂಜಾ, ಅಂದಾಜು 6,00,000/- ರೂಪಾಯಿ ಕಿಮ್ಮತ್ತಿನದು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದು, ಈ ಕುರಿತು ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ ರಾಮಚಂದ್ರ ಕೌಲಗಿ (42 ವರ್ಷ) ಸಾ. ಪಂಡರಪುರ ಜಿ. ಸೊಲ್ಲಾಪುರ ಮತ್ತು ಸಾಹೇಬರಾವ ವಿಶ್ವನಾಥ್ ಪಾಲಿಕೆ ಸಾ. ಹಲದೈವಡಿ (50 ವರ್ಷ) ತಾ. ಸಾಂಗೋಲಾ ಜಿ. ಸೊಲ್ಲಾಪುರ ಬಂಧಿತರು.
ಈ ಕಾರ್ಯಾಚರಣೆಯಲ್ಲಿ ಬಿ.ಆರ್. ಗಡ್ಡಕರ್ ಪೊಲೀಸ್ ಇನ್ಸಪೇಕ್ಟರ್, ಡಿಸಿಆರ್‌ಬಿ ಘಟಕದ ಎಎಸ್‌ಐ ಟಿ.ಕೆ. ಕೋಳಚಿ, ಎ.ಎನ್. ಮಸರಗಪ್ಪಿ, ವಿ.ವಿ. ಗಾಯಕವಾಡ ಮತ್ತು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಎಸ್.ಎ.ಬೇವನೂರ, ಎನ್.ಆರ್. ಘಡೆಪ್ಪನವರ, ಎಲ್.ವಾಯ್.ಕೀಲಾರಗಿ ಇವರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ