Latest

ಪೊಲೀಸರನ್ನೇ ಥಳಿಸಿ ಜೈಲು ಸೇರಿದ ಯುವಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Home add -Advt

ಬೆಳಗಾವಿ ನಗರ ಸಂಚಾರ ಉತ್ತರ ಠಾಣೆಯ ಪೊಲೀಸ್ ಕಾನ್ಸಟೇಬಲ್ ಚಂದ್ರಕಾಂತ ನಾಯಕ ಮಾರ್ಕೆಟ್ ಠಾಣೆಯ ಮುಂದಿನ ವೃತ್ತದಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.  ಬಾಪಟ ಗಲ್ಲಿಯ ಅಮೀತ್ ಪ್ರಕಾಶರಾವ್ ಚಿತ್ರಗಾರ  ಹೆಲ್ಮೇಟ್ ಧರಿಸದೆ  ಮೋಟರ್ ಸೈಕಲ್ ಮೇಲೆ ಬರುತ್ತಿದ್ದ.  ಚಂದ್ರಕಾಂತ ನಾಯಕ ಮೊಬೈಲ್‌ನಲ್ಲಿ ಅವನ ಪೋಟೊ ತೆಗೆದು ಸಂಚಾರ ನಿಯಂತ್ರಣ ಘಟಕಕ್ಕೆ ಕಳಿಸುತ್ತಿರುವಾಗ ಅವರ ಮೊಬೈಲ್ ಕಸಿದುಕೊಂಡ ಅಮಿತ್, ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ  ಬೆದರಿಕೆ ಹಾಕಿದ್ದಲ್ಲದೆ ಮೈಮೇಲೆ ಏರಿ ಬಂದು ಸಮವಸ್ತ್ರ ಹಿಡಿದು ಎಳೆದಾಡಿ, ಮುಷ್ಠಿಯಿಂದ ಹೊಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.  ತಕ್ಷಣ ಆತನನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

 

Related Articles

Back to top button