Kannada NewsKarnataka News

ಜನವಸತಿ ಪ್ರದೇಶದಲ್ಲಿ ಮೊಸಳೆ ಸೆರೆ

ಜನವಸತಿ ಪ್ರದೇಶದಲ್ಲಿ ಮೊಸಳೆ ಸೆರೆ

ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) –

ಸಮೀಪದ ಸತ್ತಿ ಗ್ರಾಮದ ನಂದೇಶ್ವರ ರಸ್ತೆಗೆ ಹೊಂದಿಕೊಂಡಿರುವ ಅತ್ತಾರ ಜನವಸತಿಯಲ್ಲಿ ಮೊಸಳೆಯೊಂದು ಸೋಮವಾರ ಸೆರೆ ಸಿಕ್ಕಿದೆ.
ಕೃಷ್ಣಾ ನದಿಯ ಪ್ರವಾಹದ ಮೂಲಕ ಬಂದ ಮೊಸಳೆ ಆಹಾರ ಅರಸುತ್ತಾ ಜನವಸತಿ ಪ್ರದೇಶದತ್ತ ಬಂದಿದೆ. ತೋಟದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಚಿತ್ರ ಧ್ವನಿ ಕೇಳಲಾರಂಭಿಸಿದೆ. ಆಗ ಅದನ್ನು ಗಮಸಿದ ಜನವಸತಿ ಪ್ರದೇಶದ ಜನ ಮೊಸಳೆಯನ್ನು ಗುರುತಿಸಿ ಹಿಂಬಾಲಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ.
ಕೃಷ್ಣಾ ನದಿಯ ಪ್ರವಾಹದಿಂದ ಕಂಗಾಲಾಗಿರುವ ಜನರಿಗೆ ಹಾವು, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಮೊಸಳೆಯಂತಹ ಪ್ರಾಣಿಗಳಿಂದ ನದಿ ದಂಡೆಯ ಜನರು ಭಯಭೀತರಾಗಿದ್ದಾರೆ. ಅಥಣಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಪ್ರಶಾಂತ ಗೌರಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದು ಬೆರೆಡೆಗೆ ಸಾಗಿಸಿದ್ದಾರೆ.
ಈ ಸಂದರ್ಭದಲ್ಲಿ ರಿಯಾಜ್ಅಹ್ಮದ ಅತ್ತಾರ, ಹಜರತ್ ಅತ್ತಾರ, ಶಮಶುದ್ದಿನ್ ಅತ್ತಾರ, ನಿಸಾರಹ್ಮದ ಅತ್ತಾರ, ತಾ.ಪಂ ಸದಸ್ಯ ಜಡೆಪ್ಪ ಕುಂಬಾರ, ನೌಶಾದ ಪಾಟೀಲ, ಮಹಮ್ಮದಯಿನಿಸ ಅತ್ತಾರ, ಅಪ್ಪಿಸಾಬ ಅತ್ತಾರ ಹಾಗೂ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button