https://youtu.be/62qiew3oYFU
ಪ್ರಗತಿವಾಹಿನಿ ಸುದ್ದಿ, ಶಿರಸಿ – ರಾಜ್ಯ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ದಿನದಿಂದ ದಿನಕ್ಕೆ ಜನಪ್ರವಾಹ ಏರುತ್ತಿದೆ. ಕರೋನಾ ಭೀತಿಯ ನಡುವೆಯೂ ಜಾತ್ರೆಗೆ ಜನ ಸಾಗರವೇ ಹರಿದುಬರುತ್ತಿದೆ.
ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆಯಿಂದಲೇ ಜನದಟ್ಟಣೆ ತೀವ್ರವಾಗಿತ್ತು. ನಟರಾಜ ರಸ್ತೆ ಮತ್ತು ಬಿಡಕಿ ಬೈಲ್ ಪ್ರದೇಶಗಳಲ್ಲಿ ಜನ ಸಂಚಾರವೇ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ರಾತ್ರಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಈ ಮಧ್ಯೆ ಶನಿವಾರ ರಾತ್ರಿ ಬಾವಿಯಲ್ಲಿ ಕಾರ್ ಓಡಿಸುವ ಸಾಹಸ ಪ್ರದರ್ಶನದ ವೇಳೆ ಕಾರೊಂದು ಪಲ್ಟಿಯಾಗಿದೆ. 3 ಕಾರ್ ಗಳು ಬಾವಿಯಲ್ಲಿ ಓಡುತ್ತಿರುವಾಗಿ ಒಂದು ಕಾರು ಮಗುಚಿ ಬಿದ್ದಿದೆ. ಆದರೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.
ವಿವಿಧ ರೀತಿಯ ಪ್ರದರ್ಶನ, ನಾಟಕಗಳಿಗೆ ಕೂಡ ಜನ ಸಾಲು ಹಚ್ಚಿ ನಿಂತು ಟಿಕೆಟ್ ಖರೀದಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದಲೂ ಜನ ಆಗಮಿಸುತ್ತಿದ್ದಾರೆ. ಯಾವ ರಸ್ತೆ ನೋಡಿದರೂ ಸಂಚಾರ ದಟ್ಟಣೆಯಿಂದ ಕೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ