Latest

ಸುಟ್ಟ ಸ್ಥಿತಿಯಲ್ಲಿ ಕಾರಿನಲ್ಲಿ ಮೃತದೇಹ ಪತ್ತೆ; ಸತ್ತ ಮಹಿಳೆ ಬದುಕಿರುವುದಾದರೂ ಹೇಗೆ?

ಪ್ರಗತಿವಾಹಿನಿ ಸುದ್ದಿ; ಉಡುಪಿ: ಬೈಂದೂರು ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಮಹಿಳೆ ಬದುಕುಳಿದಿರುವುದು ಗೊತ್ತಾಗಿದ್ದು, ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಯಾರದು ಎಂಬುದು ಯಕ್ಷಪ್ರಶ್ನೆಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಬಳಿ ಒತ್ತಿಣೆಯ ಹೆನ್ ಬೇರು ಎಂಬಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಕಾರಿನೊಳಗೆ ಮೃತದೇಹ ಪತ್ತೆಯಾಗಿತ್ತು.

ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಕಾರ್ಕಳದ ಶಿಲ್ಪಾ ಎಂಬ ಮಹಿಳೆಯದ್ದಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಶಿಲ್ಪಾ ಜೀವಂತವಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕಾರಿನಲ್ಲಿದ್ದ ಮೃತದೇಹದ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗಿದೆ.

ಸುಟ್ಟು ಹೋಗಿರುವ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬುವರದ್ದಾಗಿದ್ದು, ಅವರು ಕೂಡ ಊರಿನಲ್ಲಿಯೇ ಇದ್ದಾರೆ. ಸದಾನಂದ ಅವರು 10 ವರ್ಷಗಳ ಹಿಂದೆ ಕಾರು ಮಾರಾಟ ಮಾಡಿದ್ದರು.ಆದರೆ ದಾಖಲೆ ಪತ್ರಗಳನ್ನು ಮಾರಾಟ ಮಾಡಿದ ವ್ಯಕ್ತಿ ಹೆಸರಿಗೆ ಬದಲಿಸಿರಲಿಲ್ಲ. ಇನ್ನು ಶಿಲ್ಪಾ ಅವರ ಪತಿ ಮೃತಪಟ್ಟಿದ್ದು, ಅವರು ಸದಾನಂದ ಅವರಿಗೆ ಆತ್ಮೀಯರಾಗಿದ್ದರು ಎಂದು ಹೇಳಲಾಗುತ್ತಿದೆ.

ಕಾರಿನ ಚೆಸ್ಸಿ ನಂಬರ್ ಪರಿಶೀಲನೆ ನಡೆಸಿದ ಪೊಲೀಸರಿಗೆ ಕಾರು ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗಿದೆ. ಸಾಸ್ತಾನ ಟೋಲ್ ಗೇಟ್ ಬಳಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಹಣ ಪಾವತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮೂಲಕ ಕಾರಿನಲ್ಲಿ ಮಹಿಳೆಯೊಬ್ಬರಿದ್ದರು ಎಂಬುದು ದೃಢಪಟ್ಟಿದೆ. ಆದರೆ ಆ ಮಹಿಳೆ ಯಾರು? ಆಕೆಯನ್ನು ಕೊಲೆಗೈದು ದುಷ್ಕರ್ಮಿಗಳು ಹೆನ್ ಬೇರು ಪ್ರದೇಶಕ್ಕೆ ತಂದು ಕಾರು ಸಮೇತ ಸುಟ್ಟು ಹಾಕಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪೊಲಿಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.

ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯವನಿಂದಲೇ ನಿರಂತರ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button