Belagavi NewsBelgaum NewsCrimeKarnataka NewsNationalTravel

*ಬೈಕ್ ಮೇಲಿಂದ ಬಿದ್ದ ಮಹಿಳೆ ಮೇಲೆ ಹರಿದ ಕಾರು: ಸ್ಥಳದಲ್ಲೆ ಮಹಿಳೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಚಿಕ್ಕೋಡಿ-ಮಿರಜ ರಸ್ತೆ ಸೇತುವೆಯ ಮೇಲೆ ಬೈಕ್ ಮೇಲಿಂದ ಬಿದ್ದ ಮಹಿಳೆಯ ಮೇಲೆ ಕಾರ್ ಹರಿದಿರುವ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸಂಗೀತಾ ಕಾಶಪ್ಪಾ ಸಾಮನೆ(25) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ. ಮೂಲತಹ ಕಾಗವಾಡ ತಾಲೂಕಿನ ಜೂಗುಳ ಗ್ರಾಮದವರು. ಮೃತ ಸಂಗೀತಾ ಗಂಡ ಕಾಶಪ್ಪಾಯನ‌ ಜೊತೆ ಬೈಕ್ ಮೇಲೆ ಹೋಗುವಾಗ  ಬೈಕ್ ಮೇಲಿಂದ ಬಿದ್ದಿದ್ದಾಳೆ. ಈ ವೇಳೆ  ಕಾರು ಸಂಗೀತಾ ಮೇಲೆ ಹಾಯ್ದು ಹೋಗಿದೆ. 

ಕಾರನ್ನು ಹಾಗೂ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಂಕಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button